ದೇವನಹಳ್ಳಿ: ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕ್ಯಾಬ್ ಚಾಲಕರಿಗೆ ಇತ್ತೀಚೆಗೆ ಜಾರಿಗೊಳಿಸಿದ ಹೊಸ ಪಿಕ್-ಅಪ್ ನಿರ್ಬಂಧಗಳ ವಿರುದ್ಧ ಕರ್ನಾಟಕ ಚಾಲಕರ ಒಕ್ಕೂಟದ ನೇತೃತ್ವದಲ್ಲಿ ಟ್ಯಾಕ್ಸಿ ಚಾಲಕರು ಹಾಗೂ ವಿವಿಧ ಚಾಲಕರ ಸಂಘಗಳ ಸದಸ್ಯರು ಮಂಗಳವಾರ ಸಾದಹಳ್ಳಿ ಟೋಲ್ ಪ್ಲಾಜಾ ಬಳಿ ಪ್ರತಿಭಟನೆ ನಡೆಸಿದರು.

ಕರ್ನಾಟಕ ಚಾಲಕರ ಒಕ್ಕೂಟ, ಪೀಸ್ ಆಟೊ ಯೂನಿಯನ್, ಬೃಹತ್ ಬೆಂಗಳೂರು ಆಟೊ ಮತ್ತು ಟ್ಯಾಕ್ಸಿ ಚಾಲಕರ ಸಂಘ ಸೇರಿದಂತೆ ವಿವಿಧ ಟ್ಯಾಕ್ಸಿ ಚಾಲಕರ ಸಂಘದ ಸುಮಾರು 400 ಕ್ಯಾಬ್ ಚಾಲಕರು ಬೆಳಗ್ಗೆ 9ಕ್ಕೆ ಟೋಲ್ ಪ್ಲಾಜಾ ಬಳಿ ವಾಹನ ತಡೆದು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಿಂದಾಗಿ ಟೋಲ್ ಪ್ಲಾಜಾ ಸುತ್ತಮುತ್ತ ಸಂಚಾರ ದಟ್ಟಣೆ ಉಂಟಾಯಿತು.

ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ ಘೋಷಿಸಿರುವ ಹೊಸ ಪಿಕ್-ಅಪ್ ನಿಯಮ ಹಿಂಪಡೆಯಬೇಕೆಂದು ಆಗ್ರಹಿಸಿದರು.

ನಿಯಮಗಳ ಪ್ರಕಾರ ಖಾಸಗಿ ವಾಹನ, ಟ್ಯಾಕ್ಸಿಗಳಿಗೆ ಎಂಟು ನಿಮಿಷ ಉಚಿತ ನಿಲುಗಡೆ ಸಿಗಲಿದೆ. ಎಂಟು ನಿಮಿಷದ ನಂತರ 13 ನಿಮಿಷಗಳವರೆಗಿನ ನಿಲುಗಡೆಗೆ ₹150 ಶುಲ್ಕ ವಿಧಿಸಲಾಗುತ್ತದೆ. 13–18 ನಿಮಿಷಗಳ ನಿಲುಗಡೆಗೆ ₹300 ಶುಲ್ಕ ವಿಧಿಸಲಾಗುತ್ತದೆ. 18 ನಿಮಿಷ ಮೀರಿದ ವಾಹನಗಳನ್ನು ಪೊಲೀಸ್ ಠಾಣೆಗೆ ಕೊಂಡೊಯ್ಯುವ ಜೊತೆಗೆ ಹೆಚ್ಚುವರಿ ದಂಡ ವಿಧಿಸಲಾಗುತ್ತದೆ. ಇದು ಚಾಲಕರಿಗೆ ಹೊರೆಯಾಗಿದೆ ಎಂದು ಪ್ರತಿಭಟನನಿರತರು ಆಕ್ರೋಶ ಹೊರಹಾಕಿದರು.

ವಾಣಿಜ್ಯ ವಾಹನಗಳು ನಿಗದಿತ ಪಾರ್ಕಿಂಗ್ ಪ್ರದೇಶಗಳಲ್ಲಿ ಕಾಯಬೇಕಿದ್ದು ಅಲ್ಲಿ 10 ನಿಮಿಷ ಉಚಿತ ಪಾರ್ಕಿಂಗ್ ಸಿಗಲಿದೆ. ಅದರ ನಂತರ ಅರ್ಧ ಗಂಟೆಗೆ ₹100 ಮತ್ತು ಪ್ರತಿ ಹೆಚ್ಚುವರಿ ಗಂಟೆಗೆ ₹50 ಶುಲ್ಕ ಪಾವತಿಸಬೇಕಾಗುತ್ತದೆ ಇದು ಕಾರು ಚಾಲಕರನ್ನೇ ಗುರಿಯಾಗಿಸಿಕೊಂಡು ಮಾಡಲಾಗಿರುವ ನಿಯಮವಾಗಿದೆ ಎಂದು ಘೋಷಣೆ ಕೂಗಿದರು.

ಕರ್ನಾಟಕ ಚಾಲಕರ ಒಕ್ಕೂಟದ ಅಧ್ಯಕ್ಷ ಜಿ. ನಾರಾಯಣಸ್ವಾಮಿ ಮಾತನಾಡಿ, 'ನಮ್ಮೊಂದಿಗೆ ಯಾವುದೇ ಸಮಾಲೋಚನೆ ಇಲ್ಲದೆ ಈ ನಿಯಮ ತಂದಿದ್ದಾರೆ. 10 ನಿಮಿಷ ಕಾಯುವ ಸಮಯ ಸಾಕಾಗುವುದಿಲ್ಲ ಎಂಬುದು ವಿಮಾನ ನಿಲ್ದಾಣ ಅಧಿಕಾರಿಗಳಿಗೆ ತಿಳಿದಿದೆ. ಅವರು ಕಾಯುವ ಸಮಯ ಹೆಚ್ಚಿಸಬೇಕು ಅಥವಾ ಈ ನಿಯಮ ಹಿಂಪಡೆಯಬೇಕು' ಎಂದು ಒತ್ತಾಯಿಸಿದರು.

ಪೂರ್ವ ವಿಭಾಗದ ಜಂಟಿ ಪೊಲೀಸ್ ಆಯುಕ್ತರೊಂದಿಗೆ ಚರ್ಚೆ ನಡೆಸಲಾಗಿದೆ. ನಾಲ್ಕು ದಿನಗಳಲ್ಲಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವುದಾಗಿ ಅವರು ಭರವಸೆ ನೀಡಿದ್ದಾರೆ. ಇಲ್ಲದಿದ್ದರೇ ಮುಂದಿನ ದಿನಗಳಲ್ಲಿ ಟರ್ಮಿನಲ್ 1ರಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಪಿಕ್ ಅಪ್ ವ್ಯವಸ್ಥೆ ಬಳಸಿ: ಬಿಐಎಎಲ್

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿನಲ್ ಗಳಲ್ಲಿ ಜಾರಿ ಮಾಡಿರುವ ನೂತನ ಪಿಕ್ ಅಪ್ ವ್ಯವಸ್ಥೆ ಕುರಿತ ದೂರುಗಳನ್ನು ಪರಿಶೀಲಿಸಿ ಪ್ರಯಾಣಿಕರಿಗೆ ಅನುಕೂಲಕರ ವಾತಾವರಣ ನಿರ್ಮಿಸಲಾಗುತ್ತಿದೆ ಎಂದು ಬಿಐಎಎಲ್ ತಿಳಿಸಿದೆ.

ಎಲ್ಲ ಅಂತರರಾಷ್ಟ್ರಿಯ ವಿಮಾನ ನಿಲ್ದಾಣಗಳಲ್ಲಿ ಇರುವ ಪದ್ಧತಿಯನ್ನೇ ನಮ್ಮಲ್ಲೂ ಅನುಷ್ಠಾನಗೊಳಿಸಲಾಗಿದೆ. ಹೊಸ ನಿಯಮ ಜಾರಿಯಾದಾಗ ಪ್ರತಿರೋಧ ಎದುರಾದರೂ, ಶೇ 95 ರಷ್ಟು ಪ್ರಯಾಣಿಕರಿಗೆ ಈ ನಿಯಮ ಅನುಕೂಲಕರವಾಗಿದೆ. ಅಂಗವಿಕಲರು, ಮಕ್ಕಳು, ಹಿರಿಯ ನಾಗರಿಕರ ಸಹಿತ ನಡಿಗೆಗೆ ಕಷ್ಟವಾಗುವ ಪ್ರಯಾಣಿಕರಿಗೆ ಶಟಲ್ ಸೇವೆಗಳನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದೆ.

ಕೆಲವು ಅನಧಿಕೃತ ಟ್ಯಾಕ್ಸಿ ಚಾಲಕರು ವಿಮಾನ ನಿಲ್ದಾಣದಿಂದ
ಪ್ರಯಾಣಿಕರನ್ನು ಹತ್ತಿಸಿಕೊಂಡ ಬಳಿಕ, ಮಾರ್ಗಮಧ್ಯದಲ್ಲಿ
ನಿಗದಿಪಡಿಸಿದ್ದಕ್ಕಿಂತ ಹೆಚ್ಚು ಹಣಕ್ಕೆ ಒತ್ತಾಯಿಸುತ್ತಿರುವುದು, ಒಪ್ಪದಿದ್ದರೆ ಮಾರ್ಗಮಧ್ಯೆ ಇಳಿಸಿರುವ ಕುರಿತು ಮಹಿಳಾ ಪ್ರಯಾಣಿಕರು ದೂರಿದ್ದಾರೆ. ಸಮಸ್ಯೆ ಎದುರಿಸುವ ಬದಲು, ನಿಗದಿತ ಸ್ಥಳದಿಂದಲೇ ಅಧಿಕೃತ ಟ್ಯಾಕ್ಸಿ ಸೇವೆ ಪಡೆಯಿರಿ ಎಂದು ಬಿಐಎಎಲ್ ವಕ್ತಾರರು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.