ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೇಕಲ್: ತವರು ಮನೆಯಿಂದ ಬಾರದಕ್ಕೆ ಪತ್ನಿ ಕೊಂದ ಪತಿ

Published 30 ಮಾರ್ಚ್ 2024, 5:26 IST
Last Updated 30 ಮಾರ್ಚ್ 2024, 5:26 IST
ಅಕ್ಷರ ಗಾತ್ರ

ಆನೇಕಲ್: ಗಂಡನ ಮನೆಗೆ ಬರಲು ಪತ್ನಿ ನಿರಾಕರಿಸಿದಳು ಎಂಬ ಕಾರಣಕ್ಕೆ ಗಂಡನೇ ಪತ್ನಿಯನ್ನು ಕೊಂದು ಆತ್ಮಹತ್ಯೆ ಯತ್ನ ನಡೆಸಿರುವ ಘಟನೆ ತಾಲ್ಲೂಕಿನ ಜಿಗಣಿ ಪೊಲೀಸ್‌ ಠಾಣೆ ವ್ಯಾಪ್ತಿಯ ಜನತಾ ಕಾಲೊನಿಯಲ್ಲಿ ನಡೆದಿದೆ.

ಕೊಲೆಯಾದ ಮಹಿಳೆಯನ್ನು ಅರ್ಬಿಯಾ ತಾಜ್‌ (26) ಎಂದು ಗುರುತಿಸಲಾಗಿದೆ. ಅರ್ಬಿಯಾ ತಾಜ್‌ ಒಂದು ತಿಂಗಳ ಹಿಂದೆ ಗಂಡ ಮುಬಾರಕ್‌ನೊಂದಿಗೆ ಜಗಳ ಮಾಡಿಕೊಂಡು ತಾಯಿ ಮನೆಗೆ ಹೋಗಿದ್ದಳು. ಪತಿ ಮುಬಾರಕ್‌ ಅತ್ತೆ ಮನೆಗೆ ಬಂದು ಪತ್ನಿಯನ್ನು ಮನೆಗೆ ಬರುವಂತೆ ಒತ್ತಾಯಿಸಿದ್ದಾನೆ. ಅರ್ಬಿಯಾ ತಾಜ್‌ ಪತಿಯೊಂದಿಗೆ ತೆರಳಲು ನಿರಾಕರಿಸಿದಳು. ಹಾಗಾಗಿ ಪತ್ನಿಯನ್ನು ಮನೆಯಲ್ಲಿ ಕೂಡಿಹಾಕಿ ಚಾಕುವಿನಿಂದ ಕುತ್ತಿಗೆಗೆ ಇರಿದು ಕೊಲೆ ಮಾಡಿದ್ದಾನೆ. ನಂತರ ತಾನು ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಇದನ್ನು ಮನೆಯವರು ಗಮನಿಸಿ ಬಾಗಿಲನ್ನು ಸುತ್ತಿಗೆಯಿಂದ ಹೊಡೆದು ಒಳಬಂದು ನೋಡಿದಾಗ ಅರ್ಬಿಯಾ ತಾಜ್‌ ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಪತಿ ಮುಬಾರಕ್ ಸಹ ತೀವ್ರ ಗಾಯಗೊಂಡಿದ್ದ. ಇಬ್ಬರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಆದರೆ, ಅರ್ಬಿಯಾ ತಾಜ್‌ ಮೃತಪಟ್ಟಿದ್ದಾರೆ. ಇವರಿಗೆ ಇಬ್ಬರು ಮಕ್ಕಳಿದ್ದರು. ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT