ವಿಜಯಪುರ (ದೇವನಹಳ್ಳಿ): ವಚನಗಳು ನೈತಿಕ ಜೀವನ ಮೌಲ್ಯಗಳನ್ನು ಬೋಧಿಸುವ ನಾಡಿನ ಪ್ರಭಾವಿ ಸಾಹಿತ್ಯ ಮಾಧ್ಯಮವಾಗಿದೆ ಎಂದು ಶರಣ ಸಮ್ಮೇಳನ ಅಧ್ಯಕ್ಷ ವನಕಲ್ಲು ಮಠದ ಬಸವ ರಮಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.

ಪಟ್ಟಣದ ಗಾಂಧಿ ಚೌಕದಲ್ಲಿ ಮಂಗಳವಾರ ನಡೆದ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಸಮಾನತೆ, ಶ್ರಮಿಕ, ಕಾಯಕ, ದಾಸೋಹದ ನೆಲೆಯಲ್ಲಿ ವಚನ ಸಾಹಿತ್ಯ ಪ್ರಮುಖವಾದದ್ದು ಎಂದರು.

ಕಾಯಕ ಮತ್ತು ದಾಸೋಹ ಸಿದ್ಧಾಂತಗಳ ಮೂಲಕ ಸಮಪಾಲು, ಸಮಬಾಳು ಸಿದ್ಧಾಂತವನ್ನು ಮಂಡಿಸಬಲ್ಲ ಚಳವಳಿ ಭಾರತೀಯ ಸಂಸ್ಕೃತಿಯಲ್ಲಿ ಪ್ರಮುಖವಾಗಿವೆ ಎಂದರು.

ಇದೇ ಸಂದರ್ಭದಲ್ಲಿ ಗ್ರಾಮಾಂತರ ಜಿಲ್ಲಾ ಉತ್ಸವ, ಜಿಲ್ಲಾ ಸಹಕಾರಿ ಸಮ್ಮೇಳನ, ನಟ ವಿಷ್ಣುವರ್ಧನ್ ಜನ್ಮದಿನ ಅಮೃತಮಹೋತ್ಸವ ಕೂಡ ನಡೆಯಿತು.

ಅಖಿಲ ಕರ್ನಾಟಕ ಮಿತ್ರ ಸಂಘ, ಜಿಲ್ಲಾ ಕದಳಿ ವೇದಿಕೆ, ಜಿಲ್ಲಾ ಶರಣಸಾಹಿತ್ಯ ಪರಿಷತ್ತು, ರಾಷ್ಟ್ರೀಯ ಬಸವದಳ, ಅಕ್ಕನ ಬಳಗದ ಆಶ್ರಯದಲ್ಲಿ ಶರಣ ಸಮ್ಮೇಳನ ನಡೆಯಿತು.

ಮಿತ್ರಸಂಘದ ಅಧ್ಯಕ್ಷ ಚಿ.ಮಾ.ಸುಧಾಕರ್, ಗ್ರಾಮಾಂತರ ಜಿಲ್ಲಾ ಉತ್ಸವ ಅಧ್ಯಕ್ಷ ಹಾರಗದ್ದೆ ಆತ್ಮಾನಂದ ಗುರೂಜಿ ದಂಡಪಾಣಿ, ಜಿಲ್ಲಾ ಸಹಕಾರಿ ಸಮ್ಮೇಳನ ಅಧ್ಯಕ್ಷ ವೆಂಕಟಾಪುರ ಲಕ್ಷ್ಮಣ್, ಕದಳಿ ವೇದಿಕೆಯ ಜಿಲ್ಲಾಧ್ಯಕ್ಷೆ ಬಿ.ಸ್ವರ್ಣಗೌರಿ ಮಹದೇವ್ ಮಾತನಾಡಿದರು.

ತಾಲ್ಲೂಕು ಶರಣಸಾಹಿತ್ಯ ಪರಿಷತ್ತು ಅಧ್ಯಕ್ಷ ಮ.ಸುರೇಶ್ ಬಾಬು ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವಿ.ವಿಶ್ವನಾಥ್, ಆರ್.ಮುನಿರಾಜು, ಕೆ.ಎಚ್.ಚಂದ್ರಶೇಖರ್, ಎ.ಬಿ.ಪರಮೇಶ್, ಶ್ರೀನಿವಾಸ್, ಚಿದಾನಂದ ಬಿರಾದಾರ್, ರಾಷ್ಟ್ರೀಯ ಬಸವದಳದ ಅಧ್ಯಕ್ಷ ಬೇಕರಿ ವಿ.ಶಿವಣ್ಣ, ಖಜಾಂಚಿ ಮ.ಜಯದೇವ್, ಹೊಸಕೋಟೆಯ ಚೌಡೇಗೌಡ, ಡಾ.ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ಅಧ್ಯಕ್ಷ ಜಿ.ಎಂ.ಚಂದ್ರು,ಕರವೇ ಮಹೇಶ್, ಜಿಲ್ಲಾ ಶಸಾಪ ಅಧ್ಯಕ್ಷ ಚಂದ್ರಶೇಖರ್ ಹಡಪದ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.