ಆನೇಕಲ್: ತಾಲ್ಲೂಕಿನ ಚಂದಾಪುರದಲ್ಲಿ ಬೆಂಗಳೂರು ಜೆಸಿಬಿ, ಟ್ರಾಕ್ಟರ್ ಮತ್ತು ಟಿಪ್ಪರ್ ಮಾಲೀಕರ ಸಂಘದ ಪದಾಧಿಕಾರಿಗಳು ವಾಹನಗಳ ಬಾಡಿಗೆ ಪರಿಷ್ಕರಣೆಗೊಳಿಸಿದ್ದು ಭಾನುವಾರ ಪರಿಷ್ಕೃತ ಬಾಡಿಗೆ ದರ ಪ್ರಚಾರ ನಡೆಸಿದರು. 200ಕ್ಕೂ ಹೆಚ್ಚು ಮಂದಿ ಜೆಸಿಬಿ, ಟಿಪ್ಪರ್ ಮಾಲೀಕರು ಭಾಗಿಯಾಗಿದ್ದರು.

ಜೆಸಿಬಿ, ಟ್ರಾಕ್ಟರ್ ಮತ್ತು ಟಿಪ್ಪರ್ ವಾಹನಗಳ ಬಾಡಿಗೆ ದರವನ್ನು ಪರಿಷ್ಕರಣೆ ಮಾಡಲಾಗಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಸಂಘದ ತಿಮ್ಮಾರೆಡ್ಡಿ ಕೋರಿದರು.

ನಿರ್ಮಾಣ ಯಂತ್ರಗಳ ಮಾರಾಟ ಬೆಲೆ, ವಾಹನ ಸಾಲದ ಮೇಲಿನ ಬಡ್ಡಿ, ನಿರ್ವಹಣೆ ವೆಚ್ಚ, ಬಿಡಿ ಭಾಗಗಳ ವೆಚ್ಚ ಡಿಸೇಲ್ ದರ ಹೆಚ್ಚಾಗಿದೆ. ಇದರಿಂದಾಗಿ ಅನಿವಾರ್ಯವಾಗಿ ಟ್ರಾಕ್ಟರ್, ಟಿಪ್ಪರ್, ಜೆಸಿಬಿ ವಾಹನಗಳ ಬಾಡಿಗೆ ದರವನ್ನು ಹೆಚ್ಚಿಸಲಾಗಿದೆ ಎಂದು ಸಂಘದ ಪುನೀತ್ ತಿಳಿಸಿದರು.

ದರ ಏರಿಕೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮುಂದಿನ ದಿನಗಳಲ್ಲಿ 300-400 ಜೆಸಿಬಿ, ಟ್ರಾಕ್ಟರ್ ಮತ್ತು ಟಿಪ್ಪರ್ಗಳ ಮೆರವಣಿಗೆ ನಡೆಸಲು ಚಿಂತನೆ ನಡೆದಿದೆ. ಜನವರಿ ನಾಲ್ಕನೇ ವಾರದಲ್ಲಿ ರ್ಯಾಲಿ ಆಯೋಜಿಸಲಾಗುವುದು ಎಂದು ತಿಳಿಸಿದರು.

ಸಂಘದ ಪದಾಧಿಕಾರಿಗಳಾದ ಬಾಬುರಾವ್, ವಿನೋಧ್, ಪ್ರದೀಪ್, ಯತೀಶ್, ಪುನೀತ್, ರಾಜಶೇಖರಯ್ಯ, ಕುಮಾರ್, ದರ್ಶನ್, ಶ್ರೀಧರ್ ಸರ್ಜಾಪುರ, ವಿನೋಧ್, ಸೂರಿ, ಶಿವರಾಮರೆಡ್ಡಿ, ಗೋಪಾಲಯ್ಯ, ಮಧು, ಗಿರೀಶ್, ಸೋಮಶೇಖರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.