ವಿಜಯಪುರ: ಇಲ್ಲಿನ ವ್ಯವಸಾಯ ಸೇವಾ ಸಹಕಾರ ಸಂಘದ ನಿರ್ದೇಶಕರ ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 12 ಮಂದಿ ಆಯ್ಕೆಯಾಗಿದ್ದಾರೆ.

ಸಾಮಾನ್ಯ ಸ್ಥಾನಗಳಿಗೆ ಎಂ.ವೀರಣ್ಣ, ವಿ.ಎಂ.ನಾಗರಾಜ್, ಟಿ.ನಾಗರಾಜ್, ಎಸ್.ಶಿವಾನಂದ್, ಕೆ.ಮುನಿರಾಜು, ಚುನಾಯಿತರಾಗಿದ್ದಾರೆ. ಹಿಂದುಳಿದ ವರ್ಗ ಎ ಸ್ಥಾನಗಳಿಗೆ ಎಂ.ರಾಜಣ್ಣ, ಅಬ್ದುಲ್ ಜಲೀಲ್ ಸಾಬ್, ಮಹಿಳಾ ಮೀಸಲು ಮಂಜುಳಾ, ಸೌಭಾಗ್ಯಮ್ಮ, ಪರಿಶಿಷ್ಟ ಜಾತಿ ಭೈರಪ್ಪ, ಪರಿಶಿಷ್ಟ ಪಂಗಡ ಎಂ.ನಾರಾಯಣಸ್ವಾಮಿ, ಸಾಲಗಾರರಲ್ಲದ ಮೀಸಲು ಕ್ಷೇತ್ರಕ್ಕೆ ಆರ್.ಮುನಿರಾಜು ಚುನಾಯಿತರಾಗಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಬಿ.ಚೇತನ್‌ಗೌಡ ಗೆಲುವು ಸಾಧಿಸಿರುವ ನಿರ್ದೇಶಕರನ್ನು ಅಭಿನಂದಿಸಿ ಮಾತನಾಡಿ, ‘ಸಹಕಾರಿ ಕ್ಷೇತ್ರದಲ್ಲಿ ರೈತರ ಏಳಿಗೆಗಾಗಿ ಶ್ರಮಿಸುವಂತಹ ಅಭ್ಯರ್ಥಿಗಳನ್ನು ಮತದಾರರು ಆಯ್ಕೆ ಮಾಡಿದ್ದಾರೆ.

ಅವರು ನೂತನ ನಿರ್ದೇಶಕರ ಮೇಲೆ ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಂಡು ಸರ್ಕಾರದಿಂದ ಬರುವ ಸವಲತ್ತುಗಳು ಹಾಗೂ ಸಹಕಾರಿ ಸಂಘದಿಂದ ಸಿಗಬೇಕಿರುವ ಸವಲತ್ತುಗಳನ್ನು ಪ್ರಾಮಾಣಿಕವಾಗಿ ಅರ್ಹ ರೈತರಿಗೆ ತಲುಪಿಸುವ ಕೆಲಸ ಮಾಡಬೇಕು’ ಎಂದರು.

ನೂತನ ನಿರ್ದೇಶಕ ಎಂ.ವೀರಣ್ಣ ಮಾತನಾಡಿ, ‘ಹಿಂದಿನ ಅವಧಿಯಲ್ಲಿ ರಾಜಕೀಯ ರಹಿತವಾಗಿ ಎಲ್ಲ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸೌಲಭ್ಯ ಕೊಟ್ಟಿದ್ದೇವೆ. ರೈತರ ಪರವಾಗಿ ಕೆಲಸ ಮಾಡಿದ್ದರಿಂದ ಪುನಹ ಅವಕಾಶ ಕೊಟ್ಟಿದ್ದಾರೆ’ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಅನಂತಕುಮಾರಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಚೈತ್ರಾ ವೀರೇಗೌಡ, ಮುಖಂಡರಾದ ನಾರಾಯಣಸ್ವಾಮಿ, ಚಿನ್ನಪ್ಪ, ಕೊಮ್ಮಸಂದ್ರ ಕೆಂಪೇಗೌಡ, ಬಚ್ಚೇಗೌಡ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುನಿರಾಜು, ವಿಜಯಪುರ ಟೌನ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಮಂಜುನಾಥ್, ವೀರೇಗೌಡ, ಜೆ.ಎಸ್.ರಾಮಚಂದ್ರಪ್ಪ, ಶಿವಣ್ಣ, ವಿರೂಪಾಕ್ಷಪ್ಪ, ಗೋಣೂರು ಕೆಂಪಣ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.