ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊನೆ ಹಂತದ ಕಸರತ್ತು ಮನೆ ಮನೆಗೆ ತೆರಳಿ ಮತಯಾಚನೆ

Published 25 ಏಪ್ರಿಲ್ 2024, 14:03 IST
Last Updated 25 ಏಪ್ರಿಲ್ 2024, 14:03 IST
ಅಕ್ಷರ ಗಾತ್ರ

ವಿಜಯಪುರ(ದೇವನಹಳ್ಳಿ): ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮುಖಂಡರು, ಕಾರ್ಯಕರ್ತರು ಕೊನೆ ಹಂತದ ಕಸರತ್ತು ಎನ್ನುವಂತೆ ಕರಪತ್ರ ಹಿಡಿದು ಗುರುವಾರ ಮನೆ, ಮನೆಗೆ ತೆರಳಿ ತಮ್ಮ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದರು.

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಾರಿಗೆ ತರಲಿದೆ ಎನ್ನಲಾಗುತ್ತಿರುವ ಯೋಜನೆಗಳು ಹಾಗೂ ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಕರಪತ್ರಗಳನ್ನು ಹಿಡಿದು ಕಾಂಗ್ರೆಸ್ ಕಾರ್ಯಕರ್ತರು ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರೆ, ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಅಭ್ಯರ್ಥಿ ಪ್ರಣಾಳಿಕೆ ಪ್ರತಿಗಳನ್ನು ಕೊಟ್ಟು ಮತಯಾಚನೆ ಮಾಡಿದರು.

ಮಾದರಿ ಮತಯಂತ್ರಗಳನ್ನು ತಯಾರಿಸಿ ಮತಗಟ್ಟೆಯಲ್ಲಿ ಹೋದಾಗ ಹೇಗೆ ಮತದಾನ ಮಾಡಬೇಕು ಎನ್ನುವ ಕುರಿತು ಪ್ರಾತ್ಯಕ್ಷಿಕೆ ಮಾಡಿಸಿ ತಮ್ಮ ಅಭ್ಯರ್ಥಿಗೆ ಮತ ನೀಡುವಂತೆ ಅರಿವು ಮೂಡಿಸಿದರು.

ಕಾಲಿಗೆ ಬಿದ್ದು ಮತ ಕೇಳಿದ ಕಾರ್ಯಕರ್ತರು: ಮನೆಗಳ ಬಳಿಗೆ ಹೋಗಿ ತಮ್ಮ ಪಕ್ಷದ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡುತ್ತಾ ಮತದಾರರ ಕಾಲಿಗೆ ಬಿದ್ದು ಮತ ಕೇಳುವ ಮೂಲಕ ಮತದಾರರ ಮನವೊಲಿಸುವ ಯತ್ನವನ್ನು ಕಾರ್ಯಕರ್ತರು ನಡೆಸಿದರು.

ಮತಯಾಚನೆಗೆ ಹೋದವರಿಗೆ ತರಾಟೆ: ’ಪ್ರತಿ ಬಾರಿ ಬರುತ್ತೀರಿ. ನಿಮಗೆ ಸೈಟ್ ಕೊಡ್ತೀವಿ. ಮನೆ ಮಂಜೂರು ಮಾಡಿಸಿಕೊಡ್ತೀವಿ. ಪಿಂಚಣಿ ಕೊಡಿಸ್ತಿವಿ ಎಂದೆಲ್ಲ ಹೇಳಿ ₹500 ರೂಪಾಯಿ ಕೈಗಿಟ್ಟು ಮತ ಪಡೆದುಕೊಂಡು ಹೋಗ್ತೀರಿ. ಚುನಾವಣೆ ಮುಗಿದ ನಂತರ ಸೌಲಭ್ಯಕ್ಕಾಗಿ ನಿಮ್ಮ ಬಳಿ ಬಂದು ಕೇಳಿದರೆ ಯಾರಿಗೆ ಓಟ್ ಹಾಕಿದ್ದೀರೋ ಅವರಿಗೆ ಕೇಳಿ ಎಂದು ಬೈದು ಕಳುಹಿಸ್ತೀರಿ. 20ವರ್ಷಗಳಿಂದ ಬಾಡಿಗೆ ಮನೆಗಳಲ್ಲಿದ್ದೀವಿ ನಮಗೊಂದು ಸೈಟು ಕೊಡಲಿಲ್ಲ. ನಿಮಗೆ ಯಾಕೆ ಮತ ಹಾಕಬೇಕು’ ಎಂದು ಹಿರಿಯ ಮಹಿಳೆಯರು ರಾಜಕೀಯ ಪಕ್ಷವೊಂದರ ಕಾರ್ಯಕರ್ತರಿಗೆ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ಮಹಿಳೆಯರ ಪ್ರಶ್ನೆಗಳಿಗೆ ಉತ್ತರಿಸಲಾಗದ ಕಾರ್ಯಕರ್ತರು ನಿಮಗೆ ಇಷ್ಟ ಬಂದವರಿಗೆ ಓಟ್ ಮಾಡಿಕೊಳ್ಳಿ’ ಎಂದು ವಾಪಸ್‌ ಹೋದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT