ಆನೇಕಲ್ ಸಮೀಪದ ಕಾವಲಹೊಸಹಳ್ಳಿಯ ಅರಿವಿನ ಶ್ರೀಮಂದಿರದಲ್ಲಿ ವಿಶಾಲ ಕರ್ನಾಟಕ ಸ್ಕೈ ಟ್ರಸ್ಟ್ ವತಿಯಿಂದ ಪತ್ನಿ ಪ್ರಶಂಸಾ ದಿನದಲ್ಲಿ ಪತಿಯರು ತಮ್ಮ ಪತ್ನಿಯರಿಗೆ ಗುಲಾಬಿ ಹೂವು ಮುಡಿಸುತ್ತಿರುವ ದೃಶ್ಯ
ಪತ್ನಿಯು ಮನೆಗಳಲ್ಲಿ ಸಮಸ್ಯೆ ನುಂಗುವ ನೀಲಕಂಠರಾಗಿರುತ್ತಾರೆ. ಹಲವು ಒತ್ತಡಗಳ ನಡುವೆಯೂ ಕುಟುಂಬಕ್ಕಾಗಿ ಸಮಯ ಮತ್ತು ಪ್ರೀತಿ ನೀಡುವ ಕುರುಣಾಮಯಗಳು.
ಗೋವಿಂದರಾಜ ವಿಶಾಲ ಕರ್ನಾಟಕ ಸ್ಕೈ ಟ್ರಸ್ಟ್
ಜಗಳ ಕರಿಮಣಿ ಸರದಲ್ಲಿ ಬಂಗಾರ ಪೋಣಿಸಿದಂತೆ...
‘ಗಂಡ–ಹೆಂಡತಿಯರ ನಡುವೆ ಆತ್ಮ ಸಮ್ಮೀಲನ ಅವಶ್ಯಕ. ಕರಿಮಣಿ ಸರದಲ್ಲಿ ಬಂಗಾರ ಪೋಣಿಸಿದಂತೆ ಕುಟುಂಬದಲ್ಲಿ ಆಗಾಗ್ಗೆ ಪತಿ ಪತ್ನಿಯರು ಜಗಳವಾಡುತ್ತಿರಬೇಕು. ಜಗಳದಲ್ಲಿಯೂ ಪ್ರೀತಿ ನಂಬಿಕೆ ವಿಶ್ವಾಸ ಇರಬೇಕು. ಪತಿ–ಪತ್ನಿಯರಿಬ್ಬರು ತಮ್ಮ ವಂಶ ವೃಕ್ಷವನ್ನು ತೆಗೆಯದೇ ಜಗಳಾವಾಡಬೇಕು. ಇಬ್ಬರಲ್ಲಿಯೂ ಕ್ಷಮಾ ಗುಣವಿರಬೇಕು. ಗಂಡನ ಹಿತಕ್ಕಾಗಿ ಮಂಗಳಗೌರಿ ಪೂಜೆ ಭೀಮನ ಅಮಾವಸ್ಯೆ ಸೇರಿದಂತೆ ಹಲವು ಪೂಜೆಗಳಿವೆ. ಆದರೆ ಪತ್ನಿಯ ಒಳಿತಿಗಾಗಿ ಯಾವ ಪೂಜೆಯೂ ಇಲ್ಲ’ ಎಂದು ವಿಶಾಲ ಕರ್ನಾಟಕ ಸ್ಕೈ ಟ್ರಸ್ಟ್‌ನ ವಿಜಯ ನಾಗರಾಜು ತಿಳಿಸಿದರು.