ಮುಷ್ಕರ: ಕೆಎಸ್‌ಆರ್‌ಟಿಸಿ ಬೆಳಗಾವಿ ವಿಭಾಗಕ್ಕೆ ₹ 60 ಲಕ್ಷ ನಷ್ಟ!

7

ಮುಷ್ಕರ: ಕೆಎಸ್‌ಆರ್‌ಟಿಸಿ ಬೆಳಗಾವಿ ವಿಭಾಗಕ್ಕೆ ₹ 60 ಲಕ್ಷ ನಷ್ಟ!

Published:
Updated:

ಬೆಳಗಾವಿ: ಮಂಗಳವಾರ ನಡೆದ ಕಾರ್ಮಿಕರ ಸಾರ್ವತ್ರಿಕ ಮುಷ್ಕರದಿಂದಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬೆಳಗಾವಿ ವಿಭಾಗಕ್ಕೆ ₹ 60 ಲಕ್ಷ ನಷ್ಟವಾಗಿದೆ.

‘ನಿತ್ಯ ಇಲ್ಲಿನ ಕೇಂದ್ರ ಬಸ್‌ ನಿಲ್ದಾಣ ಹಾಗೂ ನಗರ ಬಸ್‌ ನಿಲ್ದಾಣದಿಂದ ಸಂಜೆ 5ರವರೆಗೆ ಸರಾಸರಿ 536 ಬಸ್‌ಗಳು ಕಾರ್ಯಾಚರಿಸುತ್ತವೆ. ಆದರೆ, 79 ಬಸ್‌ಗಳು ಮಾತ್ರ ಸಂಚರಿಸಿವೆ. ಇವುಗಳಲ್ಲಿ ಎಲ್ಲವೂ ಭರ್ತಿಯಾಗಿಲ್ಲ. ಕೊಲ್ಹಾಪುರ, ಸೊಲ್ಲಾಪುರ ಮೊದಲಾದ ಕಡೆಗಳಿಗೆ ಬಸ್‌ಗಳನ್ನು ಕಳುಹಿಸಲಾಗಿತ್ತು. ಬಹುತೇಕ ಬಸ್‌ಗಳ ಸೇವೆ ಸ್ಥಗಿತಗೊಂಡಿತ್ತು’ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಆರ್. ಮುಂಜಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಸಂಜೆ 4ರ ನಂತರ ಬಸ್‌ಗಳ ಕಾರ್ಯಾಚರಣೆ ಆರಂಭಗೊಂಡಿತು. ಇದರಿಂದಾಗಿ, ನೌಕರರು ಬುಧವಾರ (ಜ.9) ಮುಷ್ಕರದಲ್ಲಿ ಭಾಗವಹಿಸುವುದು ಅನುಮಾನ. ಪರಿಸ್ಥಿತಿ ನೋಡಿಕೊಂಡು ಕ್ರಮ ಕೈಗೊಳ್ಳಲಾಗುವುದು’ ಎಂದು ಪ್ರತಿಕ್ರಿಯಿಸಿದರು.

ಕೆಎಸ್‌ಆರ್‌ಟಿಸಿ ನೌಕರರ ಒಂದು ಸಂಘದವರು ಮುಷ್ಕರ ಬೆಂಬಲಿಸಿದ್ದರು. ಇನ್ನೊಂದು ಸಂಘದವರು ಬೆಂಬಲಿಸಿರಲಿಲ್ಲ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !