ಮಂಗಳವಾರ, ಮಾರ್ಚ್ 28, 2023
23 °C
ಪರಿಹಾರ ನೀಡಲು ಕ್ರಮ: ಉಸ್ತುವಾರಿ ಸಚಿವ

ಮಳೆ, ಪ್ರವಾಹದಿಂದ ಬೆಳಗಾವಿಯಲ್ಲಿ 14,262 ಮನೆಗಳಿಗೆ ಹಾನಿ: ಸಚಿವ ಕಾರಜೋಳ ಮಾಹಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಜಿಲ್ಲೆಯಲ್ಲಿ ಮಳೆ ಹಾಗೂ ಪ್ರವಾಹದಿಂದ 14,262 ಮನೆಗಳಿಗೆ ಹಾನಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ತಿಳಿಸಿದರು.

ಜಿಲ್ಲಾಡಳಿತದಿಂದ ನಗರದ ಸಿಪಿಇಡಿ ಕಾಲೇಜು ಮೈದಾನದಲ್ಲಿ ಸೋಮವಾರ ನಡೆದ ಕರ್ನಾಟಕ ರಾಜ್ಯೋತ್ಸವದಲ್ಲಿ ಅವರು ಮಾತನಾಡಿದರು. ವಿವಿಧ ಯೋಜನೆಗಳ ಪ್ರಗತಿಯ ಚಿತ್ರಣವನ್ನು ನೀಡಿದರು.

‘ಜುಲೈನಿಂದ ಅಕ್ಟೋಬರ್‌ವರೆಗೆ 905 (ಕೆಟಗರಿ-ಎ) ಮನೆಗಳು ಪೂರ್ಣ ಪ್ರಮಾಣದಲ್ಲಿ ಹಾನಿಗೊಂಡಿವೆ. 8,152 (ಕೆಟಗರಿ-ಬಿ) ಭಾಗಶಃ ಹಾಗೂ 5,205 (ಕೆಟಗರಿ-ಸಿ) ಅಲ್ಪಸ್ವಲ್ಪ ಹಾನಿಗೊಳಗಾಗಿವೆ. ಮಾಹಿತಿಯನ್ನು ಆರ್.ಜಿ.ಆರ್.ಎಚ್.ಸಿ.ಎಲ್. ತಂತ್ರಾಂಶದಲ್ಲಿ ಅಳವಡಿಸಲಾಗಿದೆ’ ಎಂದು ಹೇಳಿದರು.

* ಕೋವಿಡ್‌ನಿಂದ ಮೃತರಾದವರ ಕುಟುಂಬದವರಿಗೆ ಪರಿಹಾರ ಒದಗಿಸಲು ಸರ್ಕಾರದ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗುತ್ತಿದೆ.

* ಜಿಲ್ಲೆಯಲ್ಲಿ 86,832 ರೈತರ 1,15,661 ಹೆಕ್ಟೇರ್ ಕೃಷಿ, 7,424 ರೈತರ 4,232.6 ಹೆಕ್ಟೇರ್ ತೋಟಗಾರಿಕೆ ಬೆಳೆ ಸೇರಿ ಒಟ್ಟು 9,4256 ರೈತರ 1,19,422 ಹೆಕ್ಟೇರ್ ಬೆಳೆ ಹಾನಿಯಾಗಿದೆ. ಪರಿಹಾರ ತಂತ್ರಾಂಶದಲ್ಲಿ 1,33,664 ಸರ್ವೆಗಳನ್ನು ದಾಖಲಿಸಲಾಗಿದೆ. ಈ ಪೈಕಿ ಅರ್ಹ 54,239 ರೈತರಿಗೆ ₹ 49.11 ಕೋಟಿ ಬಿಡುಗಡೆಗೆ ಅನುಮೋದನೆ ನೀಡಲಾಗಿದೆ.

* ಬೆಳೆ ಸಮೀಕ್ಷೆ ಯೋಜನೆಯಲ್ಲಿ 14,88,195 ಕ್ಷೇತ್ರಗಳಲ್ಲಿ ಮುಂಗಾರು ಹಂಗಾಮಿನ ವಿವಿಧ ಬೆಳೆಗಳ ಮಾಹಿತಿಯನ್ನು ತಂತ್ರಾಂಶದಲ್ಲಿ ಅಪ್‌ಲೋಡ್‌ ಮಾಡಲಾಗಿದೆ.

* 35.66 ಲಕ್ಷ ಜನರಿಗೆ ಕೋವಿಡ್ ಲಸಿಕೆಯ ಮೊದಲ ಡೋಸ್ ಗುರಿ ಹೊಂದಿದ್ದು, ಅ.30ರವರೆಗೆ 31,63,220 ಮಂದಿಗೆ ನೀಡಲಾಗಿದೆ. ಶೇ 88.70ರಷ್ಟು ಪ್ರಗತಿ ಸಾಧಿಸಲಾಗಿದೆ. 35.66 ಲಕ್ಷ ಜನರ ಪೈಕಿ 2ನೇ ಡೋಸ್‍ಗೆ ಅರ್ಹತಾ ಅವಧಿ ಪೂರೈಸಿದ 15,73,299 ಜನರಲ್ಲಿ 13,81,719 ಮಂದಿಗೆ ಲಸಿಕೆ ನೀಡಿ ಶೇ 87.82ರಷ್ಟು ಪ್ರಗತಿ ಸಾಧಿಸಲಾಗಿದೆ.

* ಜಿಲ್ಲೆಯಾದ್ಯಂತ 2,04,978 ವಸತಿರಹಿತರು ಹಾಗೂ 19,887 ನಿವೇಶನರಹಿತರು ಸೇರಿ ಒಟ್ಟು 2,24,865 ಅರ್ಹ ವಸತಿ/ನಿವೇಶನರಹಿತರನ್ನು ಗುರುತಿಸಲಾಗಿದೆ. ಆಯ್ಕೆ ಪ್ರಕ್ರೀಯೆ ಜಾರಿಯಲ್ಲಿದೆ. ವಿವಿಧ ವಸತಿ ಯೋಜನೆಯಡಿ 2010-11ನೇ ಸಾಲಿನಿಂದ ಇಲ್ಲಿಯವರೆಗೆ 2,97,236 ಫಲಾನುಭವಿಗಳಿಗೆ ಮನೆ ಮಂಜೂರು ಮಾಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು