ಬುಧವಾರ, ಫೆಬ್ರವರಿ 19, 2020
25 °C

5 ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಹಾಗೂ ಪಟ್ಟಣ ಪಂಚಾಯ್ತಿಯ ತಲಾ 1 ಸ್ಥಾನ, ಗ್ರಾಮ ಪಂಚಾಯ್ತಿಯ 2 ಸ್ಥಾನಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ಪ್ರಕಟವಾಗಿದೆ.

ಜಿಲ್ಲಾ ಪಂಚಾಯ್ತಿಯ ಹೆಬ್ಬಾಳ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮಹಾಂತೇಶ ಮಲ್ಲಪ್ಪಾ ಮಗದುಮ್ಮ 11,290 ಮತಗಳನ್ನು ಪಡೆಯುವ ಮೂಲಕ ಜಯಭೇರಿ ಬಾರಿಸಿದರು.

ಇವರು ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಸತೀಶ ಶಿವಾನಂದ ಮಗದುಮ್ಮ (5,851) ಅವರನ್ನು ಪರಾಭವಗೊಳಿಸಿದರು.

ರಾಮದುರ್ಗ ತಾಲ್ಲೂಕು ಪಂಚಾಯ್ತಿಗೆ ಬಿಜೆಪಿಯ ಲೀಲಾವತಿ ಹಣಮಂತ ಕೋನಿನ ಆಯ್ಕೆಯಾಗಿದ್ದಾರೆ.

ಖಾನಾಪುರ ಪಟ್ಟಣ ಪಂಚಾಯ್ತಿಯ ಒಂದು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಅಪ್ಪಯ್ಯ ಈರಪ್ಪ ಕೊಡೊಳ್ಳಿ ಗೆಲುವು ಸಾಧಿಸಿದ್ದಾರೆ.

ಸವದತ್ತಿ ತಾಲ್ಲೂಕಿನ ತೆಗ್ಗಿಹಾಳ ಗ್ರಾಮ ಪಂಚಾಯ್ತಿಯ ತೆಗ್ಗಿಹಾಳ ಕ್ಷೇತ್ರದಲ್ಲಿ ರುಕ್ಕಮ್ಮವ್ವ ಚಂದ್ರಶೇಖರ ತಿಮ್ಮನ್ನವರ ಹಾಗೂ ರಾಯಬಾಗ ತಾಲ್ಲೂಕಿನ ಪರಮಾನಂದವಾಡಿ ಗ್ರಾಮ ಪಂಚಾಯ್ತಿಯ ಪರಮಾನಂದವಾಡಿ ಕ್ಷೇತ್ರದಲ್ಲಿ ಚಿದಾನಂದ ಮಲ್ಲಪ್ಪ ಮಿಠಾರೆ ಜಯಗಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು