ನಿಪ್ಪಾಣಿ: ‘ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಅವರ ಧರ್ಮಪತ್ನಿ ರಮಾಬಾಯಿಯವರು ನಗರಕ್ಕೆ ಭೇಟಿ ನೀಡಿ ಏ.11ರಂದು 100 ವರ್ಷ ಪೂರೈಸುತ್ತಿವೆ. ಈ ಸವಿನೆನಪಿಗಾಗಿ ನಗರದಲ್ಲಿ ಏ.15 ರಂದು ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗುವುದು’ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.

ಸ್ಥಳೀಯ ಹಾಲಸಿಧ್ದನಾಥ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ಬಾಬಾಸಾಹೇಬ ಅಂಬೇಡ್ಕರ್ ಅವರು ನಗರಕ್ಕೆ ಭೆಟಿ ನೀಡಿ 100 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಬೃಹತ್ ಸಮಾವೇಶ ಆಗಬೇಕೆಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದೆ. ಆದರೆ ಸರ್ಕಾರದಿಂದ ಯಾವುದೇ ರೀತಿಯ ಬೆಂಬಲ ಸಿಗಲಿಲ್ಲ. ಗಾಂಧೀಜಿಯವರು ಬೆಳಗಾವಿಗೆ ಭೇಟಿ ನೀಡಿ ನೂರು ವರ್ಷವಾದ ಹಿನ್ನೆಲೆಯಲ್ಲಿ ಅಲ್ಲಿ ಬೃಹತ್ ಸಮಾವೇಶವಾಯಿತು. ಆದರೆ ಅಂಬೇಡ್ವರ್ ಅವರು ನಗರಕ್ಕೆ ಬೇಟಿ ನೀಡಿದ್ದು ಸರ್ಕಾರಕ್ಕೆ ಸ್ಮರಣೆಯಾಗಲಿಲ್ಲ’ ಎಂದರು.

‘ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದ ನನ್ನಂತಹ ಮಹಿಳೆ ಶಾಸಕಿ ಹಾಗೂ ಸಚಿವೆಯಾಗಲು ಸಾಧ್ಯವಾಗಿದೆ. ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಅವರ ಧರ್ಮಪತ್ನಿ ಇಲ್ಲಿ ನಾಲ್ಕು ದಿನ ವಾಸ್ತವ್ಯ ಹೂಡಿದ್ದರು. ಈ ನಾಲ್ಕು ದಿನಗಳಲ್ಲಿ ಅವರು ಸಾವಿರಾರು ಜನರಿಗೆ ಮಾರ್ಗದರ್ಶನ ಮಾಡಿದ್ದರು. ಕೇಂದ್ರ ಹಾಗೂ ರಾಜ್ಯದ ನಮ್ಮ ಪಕ್ಷದ ವರಿಷ್ಠರು ಇಲ್ಲಿ ಕಾರ್ಯಕ್ರಮ ಆಗಬೇಕೆಂದು ಬೆಂಬಲ ಸೂಚಿಸಿದ್ದಾರೆ’ ಎಂದರು.

ಮಾಜಿ ಸಚಿವ ಎನ್. ಮಹೇಶ ಮಾತನಾಡಿ, ‘ಏ.10ಕ್ಕೆ ಬೆಂಗಳೂರಿನಲ್ಲಿ ಭೀಮಯಾತ್ರೆಯು ಪ್ರಾರಂಭಗೊಂಡು ಏ.14ಕ್ಕೆ ನಗರಕ್ಕೆ ಆಗಮಿಸಲಿದೆ. ಏ.15ರಂದು ಬೃಹತ್ ಕಾರ್ಯಕ್ರಮ ಆಯೋಜಿಸಲಾಗಿದೆ. ಭೀಮಯಾತ್ರೆಯ ಮಾರ್ಗದುದ್ದಕ್ಕೂ ಆಯ್ದ ಸ್ಥಳಗಳಲ್ಲಿ ಜಾಗೃತಿ ಸಭೆಗಳನ್ನು ಹಮ್ಮಿಕೊಂಡಿದ್ದೇವೆ’ ಎಂದರು.

‘ಅಂಬೇಡ್ಕರ್ ನಿಧನರಾದ ಮೇಲೆ ಆಗಿನ ನೆಹರು ನೇತೃತ್ವದ ಕೇಂದ್ರ ಸರ್ಕಾರ ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ನಡೆಸದೇ ದೊಡ್ಡ ಅವಮಾನ ಮಾಡಿದೆ. ಬ್ರಿಟಿಷರ ಎಜೆಂಟ್, ದೇಶದ್ರೋಹಿ ಎಂದು ಕಾಂಗ್ರೆಸ್ ಪಕ್ಷವು ಅಂಬೇಡ್ಕರವರಿಗೆ ಪಟ್ಟ ಕಟ್ಟಿದ್ದಾರೆ. ಅಂಬೇಡ್ಕರವರಿಗೆ ಆಗಿದ್ದ ಅವಮಾನವನ್ನು ಸರಿಪಡಿಸುವ ಕೆಲಸ ಬಿಜೆಪಿಯು ಮಾಡುತ್ತಿದೆ’ ಎಂದರು.

ಶಾಸಕ ದುರ್ಯೋಧನ ಐಹೊಳೆ, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಮುನಿಸ್ವಾಮಿ, ಎಸ್.ಸಿ.ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಕಾತ್ಯಾಲ, ಜಿಲ್ಲಾ ಘಟಕದ ಅಧ್ಯಕ್ಷ ಸತೀಶ ಅಪ್ಪಾಜಿಗೋಳ, ನಗರಸಭೆ ಅಧ್ಯಕ್ಷೆ ಸೋನಲ್ ಕೊಠಡಿಯಾ, ಉಪಾಧ್ಯಕ್ಷ ಸಂತೋಷ ಸಾಂಗಾವಕರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.