ಭಾನುವಾರ, ನವೆಂಬರ್ 27, 2022
26 °C

ಚರ್ಮಗಂಟು ರೋಗ: 15 ಜಾನುವಾರು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ತಾಲ್ಲೂಕಿನಲ್ಲಿ ಈ ವರೆಗೆ 15 ಜಾನುವಾರುಗಳು ಚರ್ಮಗಂಟು ಸೋಂಕಿನಿಂದ ಸಾವನ್ನಪ್ಪಿವೆ. ಜಿಲ್ಲೆಯಲ್ಲಿ ಒಟ್ಟು ಜಿಲ್ಲೆಯಲ್ಲಿ ಒಟ್ಟು 768 ಜಾನುವಾರುಗಳಿಗೆ ಚರ್ಮಗಂಟು ರೋಗ ಬಾಧಿಸಿದೆ ಎಂದು ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಜಾನುವಾರುಗಳ ಮರಣೋತ್ತರ ಪರೀಕ್ಷೆಗಾಗಿ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ಹಿರಿಯ ವಿಜ್ಞಾನಿಗಳಾದ ಡಾ.ಕೆ.ಶ್ರೀಪಾದ ಹಾಗೂ ಚರ್ಮಗಂಟು ರೋಗದ ವಿಶೇಷ ತಜ್ಞ ಡಾ.ಸಂಜೀವಕುಮಾರ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ್ದಾರೆ.

ಬೆಳಗಾವಿ ತಾಲ್ಲೂಕಿನ ಖನಗಾಂವ ಗ್ರಾಮದಲ್ಲಿ ನಾಗೇಶ ಶೆಟ್ಟು ಪಾಟೀಲ ಅವರ ಒಂದು ಹೋರಿ ಶವ ಪರೀಕ್ಷೆ ನಡೆಸಲಾಗಿದೆ ಎಂದು ಪಶುವೈದ್ಯಾಧಿ (ಆಡಳಿತ) ಡಾ.ವಿಠ್ಠಲ ಸಂಗಾನಟ್ಟಿ, ಡಾ.ಚಂದ್ರಶೇಖರ ಧರಣೆಪ್ಪಗೌಡರ ಹಾಗೂ ಡಾ.ಮಲ್ಲಪ್ಪ ತಳವಾರ, ಡಾ.ರಾಜೀವ ಎನ್. ಕೂಲೇರ, ಡಾ.ಶ್ರೀಕಾಂತ ಅರಗಂಜಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು