ಸೋಮವಾರ, ನವೆಂಬರ್ 18, 2019
27 °C

ಅಥಣಿ ಉಪ ಚುನಾವಣೆ: ಜೆಡಿಎಸ್‌ನಲ್ಲಿ ಐವರು ಆಕಾಂಕ್ಷಿಗಳು

Published:
Updated:

ಅಥಣಿ: ‘ಅಥಣಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಲು ಐವರು ಆಕಾಂಕ್ಷಿಗಳು ಮುಂದೆ ಬಂದಿದ್ದಾರೆ. ಅವರ ಹೆಸರುಗಳನ್ನು ವರಿಷ್ಠರಿಗೆ ಕಳುಹಿಸಲಾಗುವುದು’ ಎಂದು ಜೆಡಿಎಸ್‌ ಚಿಕ್ಕೋಡಿ ಜಿಲ್ಲಾ ಯುವ ಘಟಕದ ಅಧ್ಯಕ್ಷ ಅಯಾಜ ಮಾಸ್ಟರ್ ತಿಳಿಸಿದರು.

ಇಲ್ಲಿ ಭಾನುವಾರ ನಡೆದ ಕಾರ್ಯಕರ್ತರ ಸಭೆ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

‘ಮತಕ್ಷೇತ್ರದಲ್ಲಿ ಉಪಚುನಾವಣೆ ಕಾವು ಜೋರಾಗಿದೆ. ಪಕ್ಷದ ಹಿರಿಯ ಮುಖಂಡರ ಸಲಹೆಯಂತೆ ಈಗಾಗಲೇ ಎರಡು ಸಭೆಗಳನ್ನು ನಡೆಸಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚಿಸಿದ್ದೇವೆ. ಇಬ್ರಾಹಿಂ ಮುಕ್ತಾರ ಪಟೇಲ, ಅಣ್ಣಾರಾಯ ಹಾಲಳ್ಳಿ, ಬಿ.ಆರ್. ಪಾಟೀಲ, ಮಹಾನಿಂಗ ಖೋತ, ಮಹಾಂತೇಶ ಅವಟಿ ಅವರ ಹೆಸರುಗಳನ್ನು ಕಳುಹಿಸಲಾಗುವುದು. ವರಿಷ್ಠರು ಸೂಚಿಸಿದ ಅಭ್ಯರ್ಥಿ ಆಯ್ಕೆಗೆ ಶ್ರಮಿಸುತ್ತೇವೆ’ ಎಂದರು.

ಮುಖಂಡರಾದ ಗಿರೀಶ ಬುಟಾಳಿ, ಬಿ.ಆರ್. ಪಾಟೀಲ, ಲಕ್ಕಪ್ಪ ಮುಡಸಿ, ಜಕ್ಕಪ್ಪ ಧರಿಗೌಡ, ರವಿ ಹಂಜಿ, ಮಲ್ಲಿಕಾರ್ಜುನ ಕನಶೆಟ್ಟಿ, ಜಗದೀಶ ಹಿರೇಮಠ, ಎಂ.ಜಿ. ಇಟ್ನಾಳಮಠ, ಮಲ್ಲಿಕಾರ್ಜುನ ಗುಂಜಿಗಾಂವಿ ಇದ್ದರು.

ಪ್ರತಿಕ್ರಿಯಿಸಿ (+)