ಬೆಳಗಾವಿ: ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಬಿಡಿಸಿಸಿ) ಈ ಬಾರಿ ‘ಪ್ರಾಬಲ್ಯ’ದ ಕುದುರಿಯಾಗಿದೆ. ಇಲ್ಲೀಗ ಪಕ್ಷದ ಪ್ರಾಬಲ್ಯ, ಜಾತಿಯ ಪ್ರಾಬಲ್ಯ, ಅಧಿಕಾರ, ಪ್ರತಿಷ್ಠೆ, ಹಣದ ಪ್ರಾಬಲ್ಯಗಳೇ ಹೆಚ್ಚಾಗಿವೆ. ಬ್ಯಾಂಕಿನ ಮೇಲೆ ಹಿಡಿತ ಸಾಧಿಸಲು ಪ್ರಬಲರೆಲ್ಲರೂ ಕಣಕ್ಕೆ ಧುಮುಕಿದ್ದು ಇದಕ್ಕೆ ಸಾಕ್ಷಿ. ಬಲಾಢ್ಯ ರಾಜಕಾರಣಿಗಳು, ಶಾಸಕರು, ಸಚಿವರೂ ಜಿದ್ದಿಗೆ ಬಿದ್ದಿದ್ದು ಸ್ಪಷ್ಟವಾಗಿದೆ. ತಾವು ನೇರವಾಗಿ ಸ್ಪರ್ಧಿಸದಿದ್ದರೂ ತಮ್ಮ ಹಿಂಬಾಲಕರ ಕೈಯಲ್ಲಿ ಅಧಿಕಾರ ಕೊಡಿಸಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.

ಬಿಡಿಸಿಸಿ ಇಡೀ ರಾಜ್ಯದಲ್ಲಿ ಅತ್ಯಂತ ಬಲಿಷ್ಠ ಬ್ಯಾಂಕ್. 2024ರಲ್ಲಿಯೇ ₹8,000 ಕೋಟಿ ದುಡಿಯುವ ಬಂಡವಾಳ ಹೊಂದಿದ್ದು, ₹5,000 ಕೋಟಿಗೂ ಅಧಿಕ ಸಾಲ ವಿತರಿಸಿದೆ. ಇಷ್ಟು ಬಲಾಢ್ಯ ಬ್ಯಾಂಕ್ ಮೇಲೆ ಹಿಡಿತ ಸಾಧಿಸಲು ಯಾರು ತಾನೆ ಬಯಸುವುದಿಲ್ಲ? ಈ ಬ್ಯಾಂಕ್ ಅಧ್ಯಕ್ಷರಾಗುವುದೇ ಸಚಿವ ಸ್ಥಾನಕ್ಕೆ ಸಮಾನ ಎಂಬ ಮಾತು ಜನಜನಿತ. ಅ.19ರಂದು ಬ್ಯಾಂಕಿನ ಚುನಾವಣೆ ನಡೆಯಲಿದ್ದು, ಮೂರು ತಿಂಗಳ ಮುಂಚಿತವಾಗಿಯೇ ‘ಸರ್ಕಸ್’ ಆರಂಭವಾಗಿದೆ.

ಗಮನಾರ್ಹ ಅಂಶವೆಂದರೆ, ಮುಂಬರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳ ಮೇಲೂ ಹಿಡಿತ ಸಾಧಿಸಲು ಬಿಡಿಸಿಸಿ ದಾಳವಾಗಲಿದೆ. ಇದೇ ಕಾರಣಕ್ಕೆ ಪ್ರಭಾವಿ ರಾಜಕಾರಣಿಗಳು, ಶಾಸಕರೂ ಆಕಾಂಕ್ಷಿಗಳಾಗಿ ಹೊರಹೊಮ್ಮಿದ್ದಾರೆ. ಜಿಲ್ಲೆಯ 40 ಲಕ್ಷಕ್ಕೂ ಹೆಚ್ಚು ರೈತರು ಇದೇ ಬ್ಯಾಂಕ್ ಅವಲಂಬಿಸಿದ್ದಾರೆ ಎಂಬ ಮಾತೂ ಇದಕ್ಕೆ ಪುಷ್ಠಿ ನೀಡುತ್ತದೆ.

ಸಚಿವ, ಸಂಸದ, ಶಾಸಕರು ಬೆನ್ನಿಗೆ ನಿಂತು ಎರಡನೇ ಹಂತದ ನಾಯಕರಿಗೆ ಇಂಥ ಸ್ಥಾನಗಳನ್ನು ಬಿಟ್ಟುಕೊಡುವ ಕಾಲ ಒಂದಿತ್ತು. ಆದರೆ, ಈಗ ಜಿಲ್ಲೆಯ ಬಹುಪಾಲು ಶಾಸಕರೇ ‘ನಾನೂ ಅಭ್ಯರ್ಥಿ’ ಎಂದು ಘೋಷಣೆ ಮಾಡಿಕೊಂಡಿದ್ದಾರೆ. ವಿಧಾನಸಭೆಯ ಸದಸ್ಯತ್ವಕ್ಕಿಂತ ಬಿಡಿಸಿಸಿಯೇ ಪ್ರಬಲ ಎಂಬಂತೆ ವರ್ತಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ.

ಪ್ರಭಾವಿಗಳ ಪ್ರಚಾರ: ಇಷ್ಟು ವರ್ಷ ಬಿಡಿಸಿಸಿಯಿಂದ ಅಂತರ ಕಾಯ್ದುಕೊಂಡಿದ್ದ ಜಾರಕಿಹೊಳಿ ಸಹೋದರರು ಈಗ ನೇರವಾಗಿ ನುಗ್ಗಿದ್ದಾರೆ. ಸಚಿವ ಸತೀಶ ಜಾರಕಿಹೊಳಿ, ಶಾಸಕರಾದ ಬಾಲಚಂದ್ರ ಹಾಗೂ ರಮೇಶ ಕೂಡ ತಂಡ ಕಟ್ಟಿಕೊಂಡು ಪ್ರಚಾರ ಆರಂಭಿಸಿದ್ದಾರೆ. ಸಾಲದ್ದಕ್ಕೆ ಸತೀಶ ಅವರ ಪುತ್ರ ರಾಹುಲ್ ಈಗಾಗಿಲೇ ಪಿಕೆಪಿಎಸ್ ಸದಸ್ಯತ್ವ ಪಡೆದುಕೊಂಡುದ್ದು, ಬಿಡಿಸಿಸಿ ಚುನಾವಣೆಗೆ ಅಭ್ಯರ್ಥಿ ಎಂಬುದನ್ನು ದೃಢಪಡಿಸಿದ್ದಾರೆ.

‘ನಾನು ನಟ ಮಾತ್ರ. ಅಣ್ಣಾಸಾಹೇಬ ಜೊಲ್ಲೆ ನಿರ್ಮಾಪಕ, ಬಾಲಚಂದ್ರ ಜಾರಕಿಹೊಳಿ ನಿರ್ದೇಶಕ’ ಎಂದು ಹೇಳುವ ಮೂಲಕ ಸಚಿವ ಸತೀಶ ಒಳಗುಟ್ಟನ್ನೂ ರಟ್ಟು ಮಾಡಿದ್ದಾರೆ.

‘ನಾನು ನೇರವಾಗಿ ಸ್ಪರ್ಧಿಸುವುದಿಲ್ಲ. ಆದರೆ, ನಮ್ಮವರೇ ಬ್ಯಾಂಕ್ ನಿರ್ದೇಶಕರು ಹಾಗೂ ಅಧ್ಯಕ್ಷರಾಗಿರುತ್ತಾರೆ’ ಎಂಬ ಬಾಲಚಂದ್ರ ಜಾರಕಿಹೊಳಿ ಮಾತು; ಈ ಚುನಾವಣೆಯ ಕಾವನ್ನು ಕುಲುಮೆಯ ಮಟ್ಟಕ್ಕೆ ಏರಿಸಿದೆ.

ಇದೇ ಬ್ಯಾಂಕಿಗೆ ನಾಲ್ಕು ಬಾರಿ ಅಧ್ಯಕ್ಷರಾಗಿ ಬಲ ತುಂಬಿದ ರಮೇಶ ಕತ್ತಿ ಕೂಡ ಜಾರಕಿಹೊಳಿ ಸಹೋದರರ ವಿರುದ್ಧ ‘ಕತ್ತಿ’ ಬೀಸಿದ್ದಾರೆ. ‘ಹೊರಗಿನವರು ಬಂದು ಎಲ್ಲವನ್ನೂ ಹಾಳು ಮಾಡುತ್ತಿದ್ದಾರೆ’ ಎಂಬ ಅವರ ಮಾತು ಮತದಾರರನ್ನು, ಬೆಂಬಲಿಗರನ್ನು ಒಂದುಗೂಡಿಸುಷ್ಟು ಕಸುವು ಹೊಂದಿದೆ.

ಮೇಲಾಗಿ, ಮಾಜಿ ಸಚಿವರೂ ಪ್ರಭಾವಿ ನಾಯಕರಾದ ಎ.ಬಿ.ಪಾಟೀಲ ಕೂಡ ಅವರೊಂದಿಗೆ ನಿಂತಿರುವುದು ಗಮನಾರ್ಹ. ಸಹಕಾರ ಕ್ಷೇತ್ರದಲ್ಲಿ ಕತ್ತಿ ಹಾಗೂ ಪಾಟೀಲ ಕುಟುಂಬಗಳ ಹಿಡಿತವು ದಶಕಗಳಿಗೂ ಹಳೆಯದು.

ಇಷ್ಟೆಲ್ಲದರ ಮಧ್ಯೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಮೌನ ಕಾಯ್ದುಕೊಂಡಿದ್ದಾರೆ. ತಿಂಗಳ ಹಿಂದಷ್ಟೇ ‘ಅವರ ಪ್ರಯತ್ನ ಅವರು ಮಾಡಲಿ, ನಮ್ಮ ಸಿದ್ಧತೆ ನಾವೂ ಮಾಡಿಕೊಂಡಿದ್ದೇವೆ’ ಎಂದು ಹೇಳಿದ್ದ ಅವರು ಇದೂವರೆಗೆ ತಮ್ಮ ದಾಳಿ ಯಾವುದೆಂದು ಬಿಟ್ಟುಕೊಟ್ಟಿಲ್ಲ.

ಸ್ವಯಂ ಘೋಷಣೆ ಮಾಡಿಕೊಂಡವರು... ಈ ಹಿಂದೆಯೂ ನಿರ್ದೇಶಕರಾಗಿದ್ದ ಶಾಸಕ ಲಕ್ಷ್ಮಣ ಸವದಿ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡ್ರ ಈ ಬಾರಿಯೂ ಆಕಾಂಕ್ಷಿಗಳಾಗುವುದು ಖಚಿತ. ಇದರೊಂದಿಗೆ ರಾಮದುರ್ಗ ಶಾಸಕ ಅಶೋಕ ಪಟ್ಟಣ ಖಾನಾಪುರ ಶಾಸಕ ವಿಠ್ಠಲ ಹಲಗೇಕರ ಚಿಕ್ಕೋಡಿ– ಸದಲಗಾ ಶಸಕ ಗಣೇಶ ಹುಕ್ಕೇರಿ ಕಾಗವಾಡ ಶಾಸಲ ಭರಮಗೌಡ ಕಾಗೆ ಕೂಡ ತಾವೂ ಅಭ್ಯರ್ಥಿಗಳು ಎಂದು ಡಂಗುರ ಬಾರಿಸಿಬಿಟ್ಟಿದ್ದಾರೆ. ತಾವೂ ಸ್ಪರ್ಧಿಸಬೇಕು ಎಂದು ಕಳೆದ ಎರಡು ತಿಂಗಳಿನಿಂದ ಖಾನಾಪುರ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿದ್ದ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ದಿಢೀರ್ ಎಂದು ಕಣದಿಂದ ಹಿಂದೆ ಸರಿದಿದ್ದಾರೆ. ‘ಮುಂದಾಲೋಚನೆ ಮಾಡಿ ಹಿಂದೆ ಸರಿದಿದ್ದೇನೆ. ಏಕೆ ಹಿಂದೆ ಸರಿದಿದ್ದೇನೆ ಎಂಬುದನ್ನು ಸಚಿವ ಸತೀಶ ಜಾರಕಿಹೊಳಿ ಅವರನ್ನೇ ಕೇಳಿರಿ’ ಎಂಬ ಅವರ ಮಾತು ಮತದಾರರ ತಲೆಗೆ ಹುಳ ಬಿಟ್ಟಂತಿದೆ. ಆದರೆ ವಿಠ್ಠಲ ಹಲಗೇಕರ ಮಾತ್ರ ಪಟ್ಟು ಹಿಡಿದಿದ್ದು ಅರವಿಂದ ಪಾಟೀಲ ದಾರಿ ಸುಗಮವಾಗುವುದು ಕಷ್ಟ. ಇಷ್ಟೆಲ್ಲ ಪ್ರಭಾವಿಗಳ ಮಧ್ಯೆ ಬಿಡಿಸಿಸಿ ‘ಪ್ರಾಬಲ್ಯ’ದ ಕುದುರೆಯಾಗಿ ಹೊರ ಹೊಮ್ಮಿದೆ ಎಂಬುದು ಸ್ಪಷ್ಟ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.