ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ‘ಕರ್ನಾಟಕ, ಮಹಾರಾಷ್ಟ್ರ, ಗೋವಾ ಸೇರಿದಂತೆ ವಿವಿಧ ರಾಜ್ಯಗಳಲ್ಲಿ 228 ಶಾಖೆಗಳನ್ನು ಹೊಂದಿರುವ ಯಕ್ಸಂಬಾ ಪಟ್ಟಣದ ಬೀರೇಶ್ವರ ಕೋ-ಅಪ್ ಕ್ರೆಡಿಟ್ ಸೊಸೈಟಿಯು ಸದಸ್ಯರಿಗೆ ಶೇ 12 ಹಾಗೂ ಸಿಬ್ಬಂದಿಗೆ ಶೇ 10 ರಷ್ಟು ಲಾಭಾಂಶವನ್ನು ಹಂಚಿದೆ’ ಎಂದು ಸಂಸ್ಥಾಪಕ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸೊಸೈಟಿಯು 2023-24ನೇ ಸಾಲಿನ ₹ 33.01 ಕೋಟಿ ಷೇರು ಮೊತ್ತದ ಶೇ 12ರಷ್ಟು ಲಾಭಾಂಶವನ್ನು 3,78,504 ಸದಸ್ಯರಿಗೆ ಹಾಗೂ ವಾರ್ಷಿಕ ಒಟ್ಟು ಸಂಬಳದ ಮೇಲೆ ಶೇ 10ರಷ್ಟು ಮೊತ್ತವನ್ನು 1400ಕ್ಕೂ ಹೆಚ್ಚು ಸಿಬ್ಬಂದಿಗೆ ಹಂಚಿಕೆ ಮಾಡಿದೆ’ ಎಂದರು.

’ಸೊಸೈಟಿಯು 2024-25ನೇ ಸಾಲಿನಲ್ಲಿ ₹35.78 ಕೋಟಿ ಷೇರು ಬಂಡವಾಳ, ₹ 237.59 ಕೋಟಿ ಕಾಯ್ದಿಟ್ಟ ಹಾಗೂ ಇತರೆ ನಿಧಿಗಳು, ₹ 4.573.38 ಕೋಟಿ ಠೇವಣಿ, ₹ 3.507.54 ಕೋಟಿ ಸಾಲ ಮತ್ತು ಮುಂಗಡಗಳು, ₹ 1.133.67 ಕೋಟಿ ಬ್ಯಾಂಕ್ ಠೇವಣಿ-ಗುಂತಾವಣೆಗಳು, ₹5,232.83 ಕೋಟಿ ದುಡಿಯುವ ಬಂಡವಾಳ, ₹ 45.35 ಕೋಟಿ ನಿವ್ವಳ ಲಾಭ ಹೊಂದಿದೆ’ ಎಂದು ಮಾಹಿತಿ ನೀಡಿದರು.

ಬೀರೇಶ್ವರ ಕೋ ಅಪ್ ಕ್ರೆಡಿಟ್ ಸೊಸೈಟಿಯ ಅಧ್ಯಕ್ಷ ಅಪ್ಪಾಸಾಹೇಬ ಜೊಲ್ಲೆ, ಉಪಾಧ್ಯಕ್ಷ ಆನಂದ ಪಾಟೀಲ, ಸಹ ಸಂಸ್ಥಾಪಕಿ, ಶಾಸಕಿ ಶಶಿಕಲಾ ಜೊಲ್ಲೆ, ಶ್ರೀನಿವಾಸ ಕರಾಳೆ, ಯಾಸಿನ್ ತಾಂಬೋಳೆ, ಸದಾನಂದ ಹಳಿಂಗಳೆ, ಬಾಬಾಸಾಹೇಬ ಕದಂ, ಪ್ರಧಾನ ವ್ಯವಸ್ಥಾಪಕ ಬಹದ್ದೂರ ಗುರವ, ಎಂ.ಕೆ.ಮಂಗಾವತಿ, ಎಸ್.ಕೆ.ಮಾನೆ, ಆರ್.ಜಿ.ಕುಂಬಾರ, ಎಸ್.ಎಂ.ಡಬ್ಬ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.