ಚನ್ನಮ್ಮನ ಕಿತ್ತೂರು: ‘ಯಡಿಯೂರಪ್ಪ ಇಲ್ಲದೆ ಹಾಳಾಗಿ ಹೋದೆವು ಎನ್ನುವುದು ಈಗ ಬಿಜೆಪಿಗೆ ನೆನಪಾಗಿದೆ. ಹೀಗಾಗಿ ಅವರ ನೇತೃತ್ವದಲ್ಲಿ ರಾಜ್ಯ ಘಟಕದ ಅಧ್ಯಕ್ಷರನ್ನು ನೇಮಕ ಮಾಡಬೇಕೆಂಬ ಮಾತುಗಳು ಪಕ್ಷದ ನಾಯಕರಿಂದ ಕೇಳಿಬರುತ್ತಿವೆ’ ಎಂದು ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ಕುಟುಕಿದರು.
ಭಾನುವಾರ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಸ್ಥಾನದಿಂದ ಅವರನ್ನು ಕೆಳಗಿಳಿಸಿದರು. ಚುನಾವಣೆ ಸಂದರ್ಭ ಹೊರತುಪಡಿಸಿದರೆ, ಅವರನ್ನು ಮೂಲೆಗುಂಪು ಮಾಡಿದರು. ಈಗ ಯಡಿಯೂರಪ್ಪ ತೆಗೆದುಕೊಂಡು ಏನು ಮಾಡುವವರಿದ್ದಾರೆ?’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.