ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಬಸ್ ನಿಲ್ದಾಣ 6 ತಿಂಗಳಲ್ಲಿ ಸಿದ್ಧ: ಶಾಸಕ ಅನಿಲ ಬೆನಕೆ

Last Updated 11 ಏಪ್ರಿಲ್ 2022, 16:00 IST
ಅಕ್ಷರ ಗಾತ್ರ

ಬೆಳಗಾವಿ: ‘ನಗರದ ಕೇಂದ್ರ ಬಸ್ ನಿಲ್ದಾಣ ಕಾಮಗಾರಿ ಆರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ’ ಎಂದು ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ತಿಳಿಸಿದರು.

ಕೇಂದ್ರ ಹಾಗೂ ನಗರ ಬಸ್ ನಿಲ್ದಾಣದ ಕಾಮಗಾರಿಯನ್ನು ಸೋಮವಾರ ವೀಕ್ಷಿಸಿದ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

‘ಕಾಮಗಾರಿ ತಡವಾಗಲು ಮುಖ್ಯವಾಗಿ ಅನುದಾನದ ಕೊರತೆ ಹಾಗೂ ಕೋವಿಡ್ ಲಾಕ್‌ಡೌನ್‌ ಕಾರಣವಾಗಿದೆ. ಬಳಿಕ ಚುರುಕಾಗಿ ನಡೆದಿದೆ. ದೊಡ್ಡದಾಗಿ ಬಸ್ ನಿಲ್ದಾಣವು ನಿರ್ಮಾಣವಾಗುತ್ತಿದೆ. ನಿಲ್ದಾಣದ ಸುತ್ತಮುತ್ತಲೂ ಬೀದಿಬದಿ ವ್ಯಾಪಾರಿಗಳು, ಆಟೊರಿಕ್ಷಾ ನಿಲ್ದಾಣದ ಸಮಸ್ಯೆ ಬಹಳಷ್ಟಿದೆ. ಪ್ರಯಾಣಿಕರಿಗೆ ಬಿಸಿಲು ಮತ್ತು ಮಳೆಯಿಂದ ತೊಂದರೆ ಆಗುತ್ತಿದ್ದು, ಅದನ್ನು ನಿವಾರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದರು.

‘ಯಾವುದೇ ಪರಿಸ್ಥಿತಿಯಲ್ಲೂ ಬಸ್ ನಿಲ್ದಾಣದ ಸುತ್ತಮುತ್ತ ಖಾಸಗಿ ಆಟೊರಿಕ್ಷಾಗಳಿಗೆ ಅವಕಾಶ ನೀಡುವುದಿಲ್ಲ. ಬಸ್ ನಿಲ್ದಾಣದ ಎರಡೂ ಕಡೆ ಪ್ರಿಪೇಯ್ಡ್‌ ಆಟೊರಿಕ್ಷಾ ಸೇವೆಗೆ ಅವಕಾಶ ಇರಲಿದೆ. ಈಗಿರುವ ಆಟೊರಿಕ್ಷಾ ನಿಲ್ದಾಣಗಳನ್ನು 2–3 ದಿನಗಳಲ್ಲಿ ತೆರವುಗೊಳಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಪ್ರಿಪೇಯ್ಡ್‌ ಆಟೊನಿಲ್ದಾಣಕ್ಕೆ ಮಾತ್ರ ಅವಕಾಶ ನೀಡಲಾಗುತ್ತದೆ. ಪ್ರಯಾಣಿಕರ ನಿಲುಗಡೆಗೆ ತಾತ್ಕಾಲಿಕವಾಗಿ ಶೆಡ್ ನಿರ್ಮಿಸುವಂತೆ ತಿಳಿಸಲಾಗಿದೆ’ ಎಂದು ಹೇಳಿದರು.

ಮಹಾನಗರಪಾಲಿಕೆ ಆಯುಕ್ತ ರುದ್ರೇಶ್ ಘಾಳಿ, ಸ್ಮಾರ್ಟ್‌ ಸಿಟಿ ಯೋಜನೆ, ದಂಡು ಮಂಡಳಿ ಹಾಗೂ ಸಾರಿಗೆ ನಿಗಮದ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT