ಅಥಣಿ: ‘ಶಿಕ್ಷಣ ರಂಗದಲ್ಲಿ ಅಥಣಿ ಕ್ಷೇತ್ರ ಐತಿಹಾಸಿಕ ಹೆಜ್ಜೆ ಇಟ್ಟಿದೆ’ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಅಥಣಿ ಪಟ್ಟಣದಲ್ಲಿ ಶುಕ್ರವಾರ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಥಣಿ ನಗರದಲ್ಲಿ ಒಂದು ಕನ್ನಡ ಹಾಗೂ ಒಂದು ಉರ್ದು ಹೈಸ್ಕೂಲ್ ಮಂಜೂರಾಗಿದೆ , ಅದರಂತೆ 11 ದ್ವಿಬಾಷಾ ಶಾಲೆಗಳು ಶುರುವಾಗಲಿವೆ , ಕೆಲವೇ ದಿನಗಳಲ್ಲಿ ಕೃಷಿ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೇರವೆರಲಿದೆ ,₹35ಕೋಟಿ ವೆಚ್ಚದಲ್ಲಿ ಕಾರ್ಮಿಕರ ಮಕ್ಕಳಿಗಾಗಿ ವಸತಿ ಶಾಲೆ ಸ್ಥಾಪನೆಯಾಗಲಿದೆ , ಮತ್ತು ಶೀಘ್ರವಾಗಿ ಅಥಣಿಯಲ್ಲಿ ಕೇಂದ್ರೀಯ ವಿದ್ಯಾಲಯ ಆರಂಭ ಸೇರಿದಂತೆ ಶೈಕ್ಷಣಿಕ ಕ್ರಾಂತಿಯಾಗಲಿದೆ’ ಎಂದರು.

ತಹಶೀಲ್ದಾರ್ ಸಿದ್ದಾರಾಯ ಬೋಸಗಿ, ಪುರಸಭೆ ಅದ್ಯಕ್ಷೆ ಶಿವಲಿಲಾ ಬುಟಾಳಿ , ಉಪಾಧ್ಯಕ್ಷೆ ಭುವನೇಶ್ವರಿ ಯಕ್ಕಂಚ್ಚಿ ,ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ಬಸವರಾಜ ಹೆಗ್ಗನಾಯಕ ಮಾತನಾಡಿದರು .

ಬಿಇಒ ಎಂ.ಆರ್.ಮುಂಜೆ, ಶಿಕ್ಷಕ ಸಂಗಮೇಶ ಹಚ್ಚಡದ, ಡಿವೈಎಸ್ಪಿ ಪ್ರಶಾಂತ ಮುನ್ನೋಳಿ, ತಾಲ್ಲೂಕು ಪಂಚಾಯಿತಿ ಅಧಿಕಾರಿ ಶಿವಾನಂದ ಕಲ್ಲಾಪುರ , ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಿಮನಿ, ಗ್ಯಾರಂಟಿ ಅನುಷ್ಠಾನದ ಅಧ್ಯಕ್ಷ ಸಿದ್ದಾರ್ಥ ಶಿಂಗೆ, ಸೇರಿದಂತೆ ಪುರಸಭೆ ಸದಸ್ಯರು ಇದ್ದರು.

ವಿವಿಧ ಶಾಲೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮೊದಲ ಬಹುಮಾನ ₹1 ಲಕ್ಷವನ್ನು ಶಾರದಾಮಾತಾ ಇಂಗ್ಲಿಷ್ ಮಾಧ್ಯಮ ಶಾಲೆ , ಎರಡನೇ ಬಹುಮಾನ ₹50 ಸಾವಿರವನ್ನು ತುಳಜಾಶಂಕರ ಶಾಲೆ , ಮೂರನೇ ಬಹುಮಾನ ₹ 25 ಸಾವಿರವನ್ನು ವಿದ್ಯಾವರ್ಧಕ ಶಾಲೆ ಪಡೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.