ಬೆಳಗಾವಿ: ಇಲ್ಲಿನ ನಾರವೇಕರ್ ಗಲ್ಲಿಯಲ್ಲಿ ಬುಧವಾರ ರಾತ್ರಿ ವೃದ್ಧೆ ಸಜೀವ ದಹನವಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ನಾರವೇಕರ್ ಗಲ್ಲಿಯ ಸುಪ್ರಿಯಾ ಬೈಲೂರ (78) ಬೆಂಕಿಗಾಹುತಿಯಾದವರು. ಈ ಮನೆಯಲ್ಲಿ ಅಜ್ಜಿಯೊಬ್ಬರೇ ವಾಸವಾಗಿದ್ದರು. ರಾತ್ರಿ 11ರ ಸುಮಾರಿಗೆ ಬೆಂಕಿ ಹೊತ್ತಿಕೊಂಡಿದೆ. ಅಜ್ಜಿ ಇದ್ದ ಇಡೀ ರೂಮಿಗೆ ಬೆಂಕಿ ವ್ಯಾಪಿಸಿದ್ದರಿಂದ ಪಾತ್ರೆ, ಬಟ್ಟೆ, ಬೆಡ್ ಎಲ್ಲವೂ ಸುಟ್ಟಿವೆ.

ಮೇಲ್ನೋಟಕ್ಕೆ ಆಕಸ್ಮಿಕ ಘಟನೆ ಎಂದು ಕಾಣಿಸುತ್ತಿದೆ. ಬೆಂಕಿ ಕೆನ್ನಾಲಿಗೆಯಿಂದ ತಪ್ಪಿಸಿಕೊಳ್ಳಲಾಗದೇ ಸುಪ್ರಿಯಾ ದಹನವಾಗಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.

ಬೆಂಕಿ ತಗುಲಿದ್ದನ್ನು ಕಂಡು ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಹಾಗೂ ಅಗ್ನಿಶಾಮಕ ದಳದವರಿಗೆ ಕರೆ ಮಾಡಿದರು. ಅಗ್ನಿ ನಂದಕ ಸಿಬ್ಬಂದಿ ಬರುವಷ್ಟರಲ್ಲಿ ಮನೆ ಸುಟ್ಟು, ಅಜ್ಜಿ ದಹನವಾಗಿದ್ದರು ಎಂದು ಖಡೆಬಜಾರ್ ಪೊಲೀಸರು ತಿಳಿಸಿದ್ದಾರೆ.

ಸಿಪಿಐ ಶ್ರೀಶೈಲ ಗಾಬಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.