ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ವಿದ್ಯುತ್ ಅವಘಡ: ಮೃತರಿಗೆ ಪರಿಹಾರ ಘೋಷಿಸುವಂತೆ ಕುಟುಂಬಸ್ಥರ ಪಟ್ಟು

ಪರಿಹಾರ ಘೋಷಿಸದ ಹೊರತು ಶವ ಮುಟ್ಟದಂತೆ ಎಚ್ಚರಿಕೆ
Published 12 ಆಗಸ್ಟ್ 2023, 5:33 IST
Last Updated 12 ಆಗಸ್ಟ್ 2023, 5:33 IST
ಅಕ್ಷರ ಗಾತ್ರ

ಬೆಳಗಾವಿ: ವಿದ್ಯುತ್ ಅವಘಡದಿಂದ ಮೃತಪಟ್ಟ ಮೂವರ ಸಾವಿಗೂ ಪರಿಹಾರ ಘೋಷಣೆ ಮಾಡುವವರೆಗೆ ಶವ ತೆಗೆಯಲು ಬಿಡುವುದಿಲ್ಲ ಎಂದು ಮೃತರ ಕುಟುಂಬದವರು ಹಾಗೂ ಲಂಬಾಣಿ ಸಮುದಾಯದ ಜನ ಪಟ್ಟು ಹಿಡಿದಿದ್ದಾರೆ. ಘಟನೆ ಬೆಳಿಗ್ಗೆ 6ಕ್ಕೆ ಸಂಭವಿಸಿದ್ದರೂ ಐದು ತಾಸಿನ ನಂತರವೂ ಶವ ತೆಗೆಯಲಾಗಿಲ್ಲ.

ಸ್ಥಳಕ್ಕೆ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ ತುರ್ತಾಗಿ ಸಹಾಯಧನ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಲು ಯತ್ನಿಸಿದರು. ಘಟನೆ ಕುರಿತು ತನಿಖೆ ನಡೆಸಿದ ಬಳಿಕ ಪರಿಹಾರ ಘೋಷಣೆ ಮಾಡುವುದಾಗಿ ತಿಳಿಸಿದರು.

ಇದಕ್ಕೆ ಒಪ್ಪದ ಜನ, ಪರಿಹಾರ ಘೋಷಣೆ ಮಾಡುವವರೆಗೆ ಶವ ಎತ್ತಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

ಈ ಸಾವಿಗೆ ಹೆಸ್ಕಾಂ ಅಧಿಕಾರಿಗಳು, ಕಟ್ಟಡದ ಗುತ್ತಿಗೆದಾರರ, ಮಾಲೀಕರೇ ಹಣೆ. ಅವರೆಲ್ಲ ಸ್ಥಳಕ್ಕೆ ಬರಬೇಕು ಎಂದು ಘೋಷಣೆ ಕೂಗಿದರು.

ನಗರದ ವಿವಿಧೆಡೆ ನೆಲೆಸಿರುವ, ಹೊಟ್ಟೆಪಾಡಿಗಾಗಿ ದುಡಿಯಲು ವಲಸೆ ಬಂದ ಬಹುಪಾಲು ಲಂಬಾಣಿ ಕುಟುಂಬಗಳು ಸ್ಥಳದಲ್ಲಿ ಸೇರಿವೆ.

ಲಂಬಾಣಿ ಭಾಷೆಯಲ್ಲೇ ಮಹಿಳೆಯರು ಗೋಳಿಡುತ್ತಿರುವ ದೃಶ್ಯ ಮನಕಲಕುವಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT