ಪ್ರಜಾವಾಣಿ ವಾರ್ತೆ

ಬೆಳಗಾವಿ: ‘ಜಿಲ್ಲೆಯ ಗೋಕಾಕ್ನ ಸರ್ಕಾರಿ ಔಷಧ ಉಗ್ರಾಣದಲ್ಲಿ ₹97 ಲಕ್ಷ ಮೌಲ್ಯದ ಅವಧಿ ಮುಗಿದ ಔಷಧಿಗಳು ಪತ್ತೆಯಾಗಿವೆ. ಇದನ್ನೇ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಗಳಿಗೆ ಪೂರೈಸಲಾಗುತ್ತಿದೆ. ಇದು ದೊಡ್ಡ ಅಪರಾಧ. ಇಲಾಖೆ ಅಧಿಕಾರಿಗಳು ಸೇರಿ ಎಲ್ಲರನ್ನೂ ಹೊಣೆ ಮಾಡುತ್ತೇವೆ. ನೋಟಿಸ್ ನೀಡಿ, ಪ್ರಕರಣ ದಾಖಲಿಸುತ್ತೇವೆ’ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಹೇಳಿದರು.

‘ಉಗ್ರಾಣಕ್ಕೆ ಬರುವ ಮುನ್ನವೇ ಅರ್ಧದಷ್ಟು ಔಷಧಿಗಳ ಅವಧಿ ಮುಗಿದಿದೆ. ಆದರೂ ಖರೀದಿಸಿ, ಸಂಗ್ರಹಿಸಿದ್ದಾರೆ. ಅವುಗಳನ್ನೇ ಪೂರೈಸುತ್ತಿರುವ ರೋಗಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು. ಇದರಲ್ಲಿ ದೊಡ್ಡಪ್ರಮಾಣದ ಭ್ರಷ್ಟಾಚಾರ ನಡೆದಿದೆ. ರಾಜ್ಯದ ಎಲ್ಲ ಔಷಧಿ ಉಗ್ರಾಣಗಳನ್ನೂ ಪರಿಶೀಲಿಸುತ್ತೇವೆ’ ಎಂದು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.

Quote -

Cut-off box - null

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.