ಖಾನಾಪುರ: ತಾಲ್ಲೂಕಿನ ವಿವಿಧೆಡೆಯ ರಸಗೊಬ್ಬರ ಮಾರಾಟ ಮಳಿಗೆಗಳ ಮೇಲೆ ಮಂಗಳವಾರ ಆಕಸ್ಮಿಕ ದಾಳಿ ನಡೆಸಿರುವ ಕೃಷಿ ಅಧಿಕಾರಿಗಳ ತಂಡ ಹೆಚ್ಚಿನ ದರದಲ್ಲಿ ರೈತರಿಗೆ ರಸಗೊಬ್ಬರ ಮಾರಾಟ ಮಾಡುತ್ತಿದ್ದ ಕೆಲ ಮಳಿಗೆಗಳ ಮೇಲೆ ಕ್ರಮಕ್ಕೆ ಮುಂದಾಗಿದ್ದಾರೆ.

‘ತಾಲ್ಲೂಕಿನ ಕೆಲ ಮಳಿಗೆಗಳಲ್ಲಿ ಯೂರಿಯಾ ಮತ್ತು 10:26:26 ಗೊಬ್ಬರದ ಚೀಲಗಳನ್ನು ಗರಿಷ್ಠ ಮಾರಾಟ ದರಕ್ಕಿಂತ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡುತ್ತಿರುವ ಕುರಿತು ರೈತರಿಂದ ದೂರು ಬಂದಿದ್ದಕ್ಕೆ ದಾಳಿ ನಡೆಸಲಾಗಿದೆ. ಕೆಲ ಮಾರಾಟ ಮಳಿಗೆಯಲ್ಲಿ ರೈತರಿಗೆ ಹೆಚ್ಚಿನ ದರದಲ್ಲಿ ರಸಗೊಬ್ಬರ ಮಾರುತ್ತಿರುವುದು ಕಂಡುಬಂದಿದೆ. ಅಂತಹ ಮಳಿಗೆಯವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ದಾಮೋದರ ಚವಾಣ ತಿಳಿಸಿದರುದರು.

ತಾಲ್ಲೂಕಿನ ಎಲ್ಲ ರಸಗೊಬ್ಬರ ಮಳಿಗೆಗಳಲ್ಲಿ ಗೊಬ್ಬರದ ದಾಸ್ತಾನು ಮತ್ತು ದರಪಟ್ಟಿ ಅಳವಡಿಸಲು ಸೂಚಿಸಲಾಗಿದೆ. ಮಳಿಗೆಗಳಲ್ಲಿ ಗೊಬ್ಬರ ಖರೀದಿಸುವಾಗ ಗೊಬ್ಬರದ ದರದಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ರೈತರು ನೇರವಾಗಿ ತಮಗೆ ಅಥವಾ ತಮ್ಮ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಮಾಹಿತಿ ಅಥವಾ ದೂರು ನೀಡುವಂತೆ ಅವರು ಕೋರಿದರು.

ಕೃಷಿ ಅಧಿಕಾರಿ ವೀಣಾ ಬೀಡಿಕರ, ಸಹಾಯಕ ಕೃಷಿ ಅಧಿಕಾರಿ ಎಂ.ಬಿ ರಾಠೋಡ, ಮಂಜುನಾಥ ಕುಸುಗಲ್, ಪ್ರದೀಪ ಮೂಗಬಸವ, ಬಿರಾದಾರ ಪಾಟೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.