ಭಾನುವಾರ, ಸೆಪ್ಟೆಂಬರ್ 20, 2020
23 °C

ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ 23ರಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಬೆಳಗಾವಿ ತಾಲ್ಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ವಡಗಾವಿಯ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಜೂನ್ 23ರಂದು ನಡೆಸುತ್ತಿರುವುದು ಅತಂತ್ಯ ಯೋಗ್ಯವಾಗಿದೆ. ಗಡಿ ಸಮಸ್ಯೆ ಎದುರಾದಾಗ ವಡಗಾವಿ, ಖಾಸಬಾಗ್, ವಡಗಾವಿ, ಶಹಾಪುರ ಭಾಗದ ಜನರು ಕನ್ನಡಕ್ಕೆ ಸದಾಕಾಲ ಬೆಂಗಾವಲಾಗಿ ನಿಲ್ಲುತ್ತಿದ್ದಾರೆ. ಹೀಗಾಗಿ, ಅಲ್ಲಿ ಕನ್ನಡ ಕಹಳೆ ಮೊಳಗಬೇಕು’ ಎಂದು ಕಾರಂಜಿಮಠದ ಗುರುಸಿದ್ದ ಸ್ವಾಮೀಜಿ ಹೇಳಿದರು.

ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಶಿವಶಂಕರ ಹಿರೇಮಠ ಅವರನ್ನು ಮಂಗಳವಾರ ಕನ್ನಡ ಸಾಹಿತ್ಯ ಭವನದಲ್ಲಿ ವಿದ್ಯುಕ್ತವಾಗಿ ಆಹ್ವಾನಿಸಿ, ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಕನ್ನಡ ಭಾಷೆ ಬೆಳವಣಿಗೆಗೆ ಸಮ್ಮೇಳನಗಳು ಪೂರಕವಾಗಿವೆ’ ಎಂದರು.

ಸಾಹಿತಿ ಗೋಪಾಲಕೃಷ್ಣ ಪೈ ಮಾತನಾಡಿ, ‘ಗಡಿ ಭಾಗದಲ್ಲಿ ಕನ್ನಡ ಕಾರ್ಯಕ್ರಮಗಳನ್ನು ಹೆಚ್ಚಾಗಿ ನಡೆಸಬೇಕು. ಇದರಿಂದ ಕನ್ನಡಕ್ಕೆ ಇನ್ನಷ್ಟು ಮೆರುಗು ಬಂದಂತಾಗುತ್ತದೆ’ ಎಂದು ತಿಳಿಸಿದರು.

ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಸಸಾಲಟ್ಟಿ, ಸಾಹಿತಿಗಳಾದ ಎಲ್.ಎಸ್. ಶಾಸ್ತ್ರಿ, ಎಂ.ಎಸ್. ಇಂಚಲ, ವಿ.ಎನ್. ಜೋಶಿ, ಬಿ.ಎಸ್. ಗವಿಮಠ, ಶಾ.ಮಂ. ಕೃಷ್ಣರಾವ್, ಬಸವರಾಜ ಜಗಜಂಪಿ, ಸುಭಾಷ ಇರಜಿ, ಮೋಹನ ಕಳಸದ, ಎ.ಎ. ಸನದಿ, ದೀಪಿಕಾ ಚಾಟೆ, ಹೇಮಾ ಸೊನ್ನೋಳ್ಳಿ, ರವೀಂದ್ರ ತೋಟಗೇರ, ವಿ. ಹಡಗಿನಾಳ, ವಿಜಯಕುಮಾರ ಜೀರಗ್ಯಾಳ, ಎಂ.ವೈ. ಮೆಣಸಿನಕಾಯಿ, ಅಶೋಕ ಮಳವಳಿ, ಮೋಹನ ಗಡಾದ, ನೀಲಗಂಗಾ ಚರಂತಿಮಠ, ಸುನಂದಾ ಎಮ್ಮಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು