ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಹಿಂಡಲಗಾ ಜೈಲಿನ ಮೇಲೆ ಪೊಲೀಸರಿಂದ ದಾಳಿ

Published 31 ಮಾರ್ಚ್ 2024, 4:16 IST
Last Updated 31 ಮಾರ್ಚ್ 2024, 4:16 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಹಿಂಡಲಗಾ ಕೇಂದ್ರ ಕಾರಾಗೃಹದ ಮೇಲೆ ನಗರ ಪೊಲೀಸರು ಭಾನುವಾರ ಬೆಳಿಗ್ಗೆ ದಾಳಿ ನಡೆಸಿದರು.

ಜೈಲಿನಲ್ಲಿ ನಡೆಯುತ್ತಿರುವ ಅಕ್ರಮ ತಡೆಗಟ್ಟುವ ಸಲುವಾಗಿ ನಗರ ಪೊಲೀಸ್ ಉಪ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ರೋಹನ್ ಜಗದೀಶ್ ನೇತೃತ್ವದಲ್ಲಿ ಪೊಲೀಸರಿಂದ ದಾಳಿ ನಡೆಯಿತು.

ಒಂದು ಗಂಟೆಗೂ ಹೆಚ್ಚು ಸಮಯ ಕಾರಾಗೃಹದಲ್ಲಿ ತಪಾಸಣೆ ಮಾಡಲಾಯಿತು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರೋಹನ್ ಜಗದೀಶ, 'ಐವರು ಸಹಾಯಕ ಪೊಲೀಸ್ ಆಯುಕ್ತರು ಹಾಗೂ ಸಿಬ್ಬಂದಿ ಸೇರಿಕೊಂಡು ದಾಳಿ ಮಾಡಿದ್ದೇವೆ. ಶ್ವಾನದಳದ ಮೂಲಕ ಇಡೀ ಜೈಲಿನ ತಪಾಸಣೆ ಮಾಡಿದ್ದೇವೆ. ಇಲ್ಲಿ ತಂಬಾಕು, ಸಿಗರೇಟಿನ ಪ್ಯಾಕ್ ಗಳು ಸಿಕ್ಕಿವೆ. ಭದ್ರತೆ ಇದ್ದರೂ ಇವೆಲ್ಲ ಹೇಗೆ ಒಳಗೆ ಹೋಗುತ್ತವೆ ಎಂಬುದರ ಕುರಿತಾಗಿ ತನಿಖೆ ಮಾಡಬೇಕಿದೆ' ಎಂದರು.

'ಸದ್ಯ ಮೊಬೈಲ್ ಸಿಕ್ಕಿಲ್ಲ. ಆದರೆ, ಮೊಬೈಲ್ ಚಾರ್ಜರ್ ಸಿಕ್ಕಿವೆ. ಬ್ಲ್ಯೂಟೂಥ್ ಡಿವೈಸ್ ಸಹ ಸಿಕ್ಕಿದ್ದು, ವಶಕ್ಕೆ ಪಡೆದಿದ್ದೇವೆ' ಎಂದು ತಿಳಿಸಿದರು.

ಹಿಂಡಲಗಾ ಜೈಲಿನಲ್ಲಿ ವ್ಯಾಪಕವಾಗಿ ಅಕ್ರಮ ಚಟುವಟಿಕೆ ನಡೆಯುತ್ತಿವೆ. ಕೈದಿಗಳು ಮೊಬೈಲ್, ಟಿ.ವಿ ಬಳಸುತ್ತಿದ್ದಾರೆ ಎಂಬ ಆರೋಪ ಇತ್ತೀಚೆಗೆ ಕೇಳಿಬರುತ್ತಿವೆ. ಇಲ್ಲಿನ ಕೈದಿಯೊಬ್ಬ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಕರೆಮಾಡಿ, ಜೀವ ಬೆದರಿಕೆ ಹಾಕಿದ ಘಟನೆಯೂ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT