ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ರಾಮದುರ್ಗ: ನಂದಿ ಮೂರ್ತಿ ಲೋಕಾರ್ಪಣೆ

Last Updated 11 ಮಾರ್ಚ್ 2021, 15:58 IST
ಅಕ್ಷರ ಗಾತ್ರ

ರಾಮದುರ್ಗ (ಬೆಳಗಾವಿ ಜಿಲ್ಲೆ): ಹೊರವಲಯದ ಮುಳ್ಳೂರು ಗುಡ್ಡದಲ್ಲಿ ಸ್ಥಾಪಿಸಿರುವ ದೇಶದಲ್ಲೆ ಅತಿ ಎತ್ತರದ್ದು ಎನ್ನಲಾದ ‘ನಂದಿ’ ವಿಗ್ರಹದ ಲೋಕಾರ್ಪಣೆ ಕಾರ್ಯಕ್ರಮ ಮಹಾಶಿವರಾತ್ರಿ ದಿನವಾದ ಗುರುವಾರ ವಿಜೃಂಭಣೆಯಿಂದ ನೆರವೇರಿತು. ಅದನ್ನು ನೋಡಲು ಭಕ್ತರು ದಂಡು ದಂಡಾಗಿ ಬರುತ್ತಿದ್ದಾರೆ.

ಇಲ್ಲಿ ಸ್ಥಾಪಿಸಿರುವ ರಾಜ್ಯದ 2ನೇ ಅತಿ ಎತ್ತರದ್ದು ಎನ್ನಲಾದ 78 ಅಡಿ ಎತ್ತರದ ಶಿವನ (ರಾಮೇಶ್ವರ) ಮೂರ್ತಿ ಮುಂಭಾಗದಲ್ಲಿ ನಂದಿ (ಬಸವಣ್ಣ) ಮೂರ್ತಿಯನ್ನು ಸ್ಥಾಪಿಸಿ ಗುಡ್ಡವನ್ನು ಮತ್ತಷ್ಟು ಆಕರ್ಷಕಗೊಳಿಸಲಾಗಿದೆ.

‘22 ಅಡಿ ಎತ್ತರ, 32 ಅಡಿ ಉದ್ದ ಹಾಗೂ 14 ಅಡಿ ಅಗಲವಿರುವ ಈ ಮೂರ್ತಿ ಸಿದ್ಧಪಡಿಸಲು ಶಿಲ್ಪಿಗಳು ಎರಡು ವರ್ಷಗಳು ಕೆಲಸ ಮಾಡಿದ್ದಾರೆ. ಇದು ದೇಶದಲ್ಲೇ ಅತಿ ಎತ್ತರದ ಮೂರ್ತಿಯಾಗಿದೆ’ ಎಂದು ಸ್ಥಾಪಿಸಿರುವ ಮಾಜಿ ಶಾಸಕ ಅಶೋಕ ಪಟ್ಟಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT