ಸೋಮವಾರ, ಸೆಪ್ಟೆಂಬರ್ 16, 2019
29 °C

ಡೆರೆಕ್‌ ಫರ್ನಾಂಡೀಸ್ ನೂತನ ಬಿಷಪ್

Published:
Updated:
Prajavani

ಬೆಳಗಾವಿ: ಬೆಳಗಾವಿ ಧರ್ಮಪ್ರಾಂತ್ಯದ ನೂತನ ಬಿಷಪ್ ಆಗಿ ರೆ.ಡೆರೆಕ್‌ ಫರ್ನಾಂಡೀಸ್ ಅವರನ್ನು ನೇಮಕ ಮಾಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯವರಾದ ಅವರು ಈವರೆಗೆ ಕಾರವಾರದ ಬಿಷಪ್ ಆಗಿದ್ದರು.

‘ನಾನು ಬೆಳಗಾವಿಯಲ್ಲಿ ಪಾದ್ರಿಯಾಗಿ ಕೆಲಸ ಮಾಡಿದ್ದೆ. ಈಗ ಮತ್ತೊಮ್ಮೆ ಬೆಳಗಾವಿಗೆ ಮರಳುತ್ತಿರುವುದಕ್ಕೆ ಖುಷಿಯಾಗಿದೆ. ದೇವರ ಸೇವೆಗೆ ದೊರೆತಿರುವ ಹೊಸ ಜವಾಬ್ದಾರಿಯನ್ನು ವಿನಮ್ರವಾಗಿ ಸ್ವೀಕರಿಸಿದ್ದೇನೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ಪೀಟರ್‌ ಮಚಾಡೊ ಅವರು ಬೆಂಗಳೂರಿನ ಆರ್ಚ್‌ ಬಿಷಪ್ ನೇಮಕವಾದ ನಂತರ ಇಲ್ಲಿನ ಬಿಷಪ್ ಸ್ಥಾನ ಖಾಲಿ ಇತ್ತು. ಈ ಧರ್ಮಪ್ರಾಂತ್ಯವು ಬೆಳಗಾವಿ, ಧಾರವಾಡ, ಗದಗ, ಬಾಗಲಕೋಟೆ, ಹಾವೇರಿ ಜಿಲ್ಲೆ ಹಾಗೂ ಮಹಾರಾಷ್ಟ್ರದ ಚಂದಗಡ ತಾಲ್ಲೂಕು ಒಳಗೊಂಡಿದೆ.

Post Comments (+)