ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕೋಡಿ | ಪ್ರಕಾಶ ಹುಕ್ಕೇರಿ ಜನ್ಮದಿನ: ಎತ್ತಿನಗಾಡಿ ಓಡಿಸುವ ಸ್ಪರ್ಧೆ ಮಾ.5ಕ್ಕೆ

Published 3 ಮಾರ್ಚ್ 2024, 16:20 IST
Last Updated 3 ಮಾರ್ಚ್ 2024, 16:20 IST
ಅಕ್ಷರ ಗಾತ್ರ

ಚಿಕ್ಕೋಡಿ: ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ 77ನೇ ಜನ್ಮದಿನ ಅಂಗವಾಗಿ, ಅವರ ಅಭಿಮಾನಿ ಬಳಗದವರು ತಾಲ್ಲೂಕಿನ ಮಲ್ಲಿಕವಾಡದ ಮೈದಾನದಲ್ಲಿ ಮಾ.5ರಂದು ಮಧ್ಯಾಹ್ನ 3.30ಕ್ಕೆ ಅಂತರರಾಜ್ಯ ಮಟ್ಟದ ಎತ್ತಿನಗಾಡಿ ಓಡಿಸುವ ಸ್ಪರ್ಧೆ ಹಮ್ಮಿಕೊಂಡಿದ್ದಾರೆ.

ಶನಿವಾರ ಸಂಜೆ ಮೈದಾನಕ್ಕೆ ಸ್ಪರ್ಧೆಯ ಸಮಿತಿಯವರು ತೆರಳಿ, ವ್ಯವಸ್ಥೆ ಪರಿಶೀಲಿಸಿದರು. ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ₹51 ಲಕ್ಷ ನಗದು ಬಹುಮಾನ ಘೋಷಿಸಲಾಗಿದೆ.

ಈ ಸ್ಪರ್ಧೆ ವೀಕ್ಷಣೆಗೆ ರಾಜ್ಯ ಹಾಗೂ ಹೊರರಾಜ್ಯಗಳಿಂದ 4 ಲಕ್ಷಕ್ಕೂ ಅಧಿಕ ಜನರು ಆಗಮಿಸುವ ನಿರೀಕ್ಷೆಯಿದೆ. ಅವರ ವಾಹನಗಳ ನಿಲುಗಡೆಗೆ 8 ಕಡೆ ವ್ಯವಸ್ಥೆ ಮಾಡಲಾಗಿದೆ. ಆರೋಗ್ಯ ಇಲಾಖೆಯಿಂದ 8 ಆಂಬುಲೆನ್ಸ್‌, 4 ಪಶು ಆಂಬುಲೆನ್ಸ್ ಮತ್ತು 2 ಅಗ್ನಿಶಾಮಕ ವಾಹನಗಳ ವ್ಯವಸ್ಥೆ ಮಾಡಲಾಗಿದೆ. 20 ಸಾವಿರಕ್ಕೂ ಅಧಿಕ ಜನ ಒಂದೆಡೆ ಕುಳಿತುಕೊಳ್ಳಲು ಅನುಕೂಲವಾಗುವಂತೆ ಗ್ಯಾಲರಿ ನಿರ್ಮಿಸಲಾಗಿದೆ. ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಎತ್ತುಗಳ ಚಲನ–ವಲನದ ಮೇಲೆ ನಿಗಾ ಇರಿಸಲು 8 ಡ್ರೋನ್‌ ಕ್ಯಾಮೆರಾ ಬಳಸಲಾಗುತ್ತಿದೆ.

‘ಸ್ಪರ್ಧೆ ವೀಕ್ಷಿಸಲು ಬರುವವರಿಗೆ 30 ಕಡೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ 10 ಕಡೆ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಬಡಿಗೆ, ಬಾರಕೋಲು, ಬ್ಯಾಟರಿಯಿಂದ ಎತ್ತುಗಳಿಗೆ ಹಿಂಸೆ ನೀಡುವುದನ್ನು ನಿಷೇಧಿಸಲಾಗಿದೆ’ ಎಂದು ಸಮಿತಿ ಮುಖಂಡರಾದ ಬಾಳಾಸಾಹೇಬ ಪಾಟೀಲ, ಸುನೀಲ ಸಪ್ತಸಾಗರ ‘ಪ್ರಜಾವಾಣಿ’ಗೆ ತಿಳಿಸಿದರು. ಉಮೇಶ ಸಾತ್ವಾರ, ಕಿರಣ ಮಾಳಿ, ಅರುಣ ಮಗದುಮ್ಮ, ರವಿ ಮಾಳಿ, ವಿನೋದ ಚಿತಳೆ, ರವಿ ಮಿರ್ಜಿ, ರವಿ ಕೋತಳಿ, ರವಿ ಮಾನೆ, ಅಂಕುಶ ಕೋತಳಿ, ಪಂಕಜ ಪವಾರ, ಮಲ್ಲು ಹವಾಲ್ದಾರ ಇದ್ದರು.

ಚಿಕ್ಕೋಡಿ ತಾಲ್ಲೂಕಿನ ಮಲ್ಲಿಕವಾಡದ ಮೈದಾನದಲ್ಲಿ ನಡೆಯಲಿರುವ ಅಂತರರಾಜ್ಯ ಮಟ್ಟದ ಎತ್ತಿನಗಾಡಿ ಓಡಿಸುವ ಸ್ಪರ್ಧೆಯ ಸಿದ್ಧತೆಯನ್ನು ಸ್ಪರ್ಧೆಯ ಸಮಿತಿಯವರು ಪರಿಶೀಲಿಸಿದರು
ಚಿಕ್ಕೋಡಿ ತಾಲ್ಲೂಕಿನ ಮಲ್ಲಿಕವಾಡದ ಮೈದಾನದಲ್ಲಿ ನಡೆಯಲಿರುವ ಅಂತರರಾಜ್ಯ ಮಟ್ಟದ ಎತ್ತಿನಗಾಡಿ ಓಡಿಸುವ ಸ್ಪರ್ಧೆಯ ಸಿದ್ಧತೆಯನ್ನು ಸ್ಪರ್ಧೆಯ ಸಮಿತಿಯವರು ಪರಿಶೀಲಿಸಿದರು
‘ಸರಳವಾಗಿ ಆಚರಿಸಿ’
‘ನಾನು ರಾಜಕಾರಣದಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದೇನೆ. ನನ್ನ ಪುತ್ರ ಗಣೇಶ 3ನೇ ಬಾರಿ ಶಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ಅಭಿಮಾನಿಗಳು ವಿಶಿಷ್ಟವಾಗಿ ನನ್ನ ಜನ್ಮದಿನ ಆಚರಿಸುತ್ತಿರುವುದಕ್ಕೆ ಹೆಮ್ಮೆ ಇದೆ. ಆದರೆ ಆಡಂಬರಕ್ಕೆ ಒತ್ತು ಕೊಡಬೇಡಿ. ಸರಳವಾಗಿ ಆಚರಿಸಿ ಬಡ ಜನರಿಗೆ ನೆರವಾಗಿ’ ಎಂದು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ–2 ಆಗಿರುವ ವಿಧಾನ ಪರಿಷತ್‌ ಸದಸ್ಯ ಪ್ರಕಾಶ ಹುಕ್ಕೇರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT