ಬೆಳಗಾವಿ: ನಗರದಲ್ಲಿ ಮೈ ಕೊರೆಯುವ ಚಳಿಯ ವಾತಾವರಣದಿಂದ ಜನರು ಹೈರಾಣಾಗಿದ್ದಾರೆ.
ತಾಲ್ಲೂಕಿನ ಸಾಂಬ್ರಾ ವಿಮಾನನಿಲ್ದಾಣದಲ್ಲಿ ಬುಧವಾರ 8.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಇಷ್ಟು ತಾಪಮಾನ ಕುಸಿತ ಕಂಡುಬಂದಿರುವುದು ಹತ್ತು ವರ್ಷಗಳ ನಂತರ ಇದೇ ಮೊದಲು ಎನ್ನಲಾಗುತ್ತಿದೆ. ಮುಂಜಾನೆ ಮಂಜಿನ ವಾತಾವರಣ ಕಂಡುಬರುತ್ತಿದೆ. ಬುಧವಾರ ಬೆಳಿಗ್ಗೆ 10 ಗಂಟೆ ದಾಟಿದರೂ ಚಳಿಯ ಪ್ರಮಾಣ ಕಡಿಮೆಯಾಗಿರಲಿಲ್ಲ. ಜ. 11ರಂದು 11.9 ಡಿಗ್ರಿ ಸೆಲ್ಸಿಯಸ್, ಜ.10ರಂದು 14.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಇದರಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಹವಾಮಾನ ಮುನ್ಸೂಚನೆ ವರದಿ ಪ್ರಕಾರ, ಇನ್ನೂ ಕೆಲವು ದಿನಗಳು ಮೈಕೊರೆಯುವ ಚಳಿಯ ವಾತಾವರಣ ಇರಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.