ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವೆ ಜೊಲ್ಲೆ ವಜಾಕ್ಕೆ ಆಗ್ರಹಿಸಿ ಕಾಂಗ್ರೆಸ್‌ ಪ್ರತಿಭಟನೆ

Last Updated 26 ಜುಲೈ 2021, 15:29 IST
ಅಕ್ಷರ ಗಾತ್ರ

ಅಥಣಿ (ಬೆಳಗಾವಿ ಜಿಲ್ಲೆ): ‘ಜನರು ಪ್ರವಾಹ ಸಂಕಷ್ಟದಿಂದ ಸಾವು–ನೋವಿನ ನಡುವೆ ಇದ್ದರೆ ಬಿಜೆಪಿಯವರು ಅಪೌಷ್ಟಿಕ ಮಕ್ಕಳ ಹಾಗೂ ಗರ್ಭಿಣಿಯರಿಗೆ ವಿತರಿಸಬೇಕಾದ ಆಹಾರ ಧಾನ್ಯ ಹಾಗೂ ಮೊಟ್ಟೆ ವಿತರಣೆಯಲ್ಲೂ ಹಣ ತಿನ್ನುತ್ತಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಹೇಳಿದರು.

ಇಲ್ಲಿನ ಮಿನಿ ವಿಧಾನಸೌಧ ಆವರಣದಲ್ಲಿ ಅಥಣಿ ಹಾಗೂ ತೆಲಸಂಗ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಕಾರ್ಯಕರ್ತರು ಮೊಟ್ಟೆಗಳನ್ನು ಪ್ರದರ್ಶಿಸಿ ಸೋಮವಾರ ನಡೆಸಿದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ಅಂಗನವಾಡಿ ಕೇಂದ್ರಗಳಿಗೆ ಮೊಟ್ಟೆ ಸರಬರಾಜು ಮಾಡಲು ಗುತ್ತಿಗೆದಾರರಿಂದ ಪ್ರತಿ ತಿಂಗಳು ₹ 1 ಕೋಟಿ ಕಮಿಷನ್‌ಗೆ ಬೇಡಿಕೆ ಇಟ್ಟ ಆರೋಪವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಎದುರಿಸುತ್ತಿದ್ದಾರೆ. ಹೀಗಾಗಿ, ಅವರನ್ನು ಕೂಡಲೇ ಸಚಿವ ಸ್ಥಾನದಿಂದ ವಜಾಗೊಳಿಸಬೇಕು’ ಎಂದು ಒತ್ತಾಯಿಸಿದರು.

ತೆಲಸಂಗ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಶ್ರೀಕಾಂತ ಪೂಜಾರಿ ಮಾತನಾಡಿದರು.

ಮುಖಂಡರಾದ ಎಸ್.ಕೆ. ಬುಟಾಳಿ, ಬಸವರಾಜ ಬುಟಾಳಿ, ಅನಿಲ ಸುಣಧೋಳಿ, ಸುನೀಲ ಸಂಕ, ಶಿವು ಸಂಕ, ಅಸ್ಲಮ ನಾಲಬಂದ, ಬಸವರಾಜ ಠಕ್ಕಣ್ಣವರ, ರಾಜು ಜಮಖಂಡಿಕರ, ಗೌತಮ ಪರಾಂಜಪೆ, ರವಿ ಬಡಕಂಬಿ, ತೌಸಿಫ್ ಸಾಂಗಲೀಕರ, ಪ್ರಕಾಶ ಕೋಳಿ, ಸುರೇಶ ಕೊಳಂಬಿ, ಬಸವರಾಜ ಹಳ್ಳದಮಳ, ಸಿದ್ದು ಕೋಕಟನೂರ, ಸಚಿನ ಬುಟಾಳಿ, ಸಲಾಂ ಕಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT