ಭಾನುವಾರ, ಜೂನ್ 26, 2022
21 °C

ಚಿಕಿತ್ಸೆಗೆ ಹೆಚ್ಚಿನ ಹಣ: ಸಿಬಿಐ ತನಿಖೆ– ಶಾಸಕರ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಕೋವಿಡ್–19 ಚಿಕಿತ್ಸೆಗೆ ರೋಗಿಗಳ ಕುಟುಂಬದವರ ಬಳಿ ನಿಯಮಬಾಹಿರವಾಗಿ ಹೆಚ್ಚು ಬಿಲ್ ಪಾವತಿಸುವಂತೆ ಖಾಸಗಿ ಆಸ್ಪತ್ರೆಗಳಲ್ಲಿ ಕೇಳುವ ವಿಡಿಯೊ ಕ್ಲಿಪಿಂಗ್ ಮತ್ತು ದಾಖಲೆಗಳು ನನ್ನ ಬಳಿ ಇದೆ. ಹೆಚ್ಚು ಹಣ ಪಡೆದಿರುವವರು ಕೂಡಲೇ ಮರಳಿಸಬೇಕು. ಇಲ್ಲದಿದ್ದರೆ ಈ ಎಲ್ಲಾ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಮಾಡಬೇಕಾಗುತ್ತದೆ’ ಎಂದು ಬಿಜೆಪಿ ಶಾಸಕ ಅಭಯ ಪಾಟೀಲ ಎಚ್ಚರಿಕೆ ನೀಡಿದ್ದಾರೆ.‌

ಈ ಬಗ್ಗೆ ಶುಕ್ರವಾರ ವಿಡಿಯೊ ಹೇಳಿಕೆ ಬಿಡುಗಡೆ ಮಾಡಿರುವ ಅವರು, ‘ನಗರದಲ್ಲಿ 27 ಖಾಸಗಿ ಆಸ್ಪತ್ರೆಗಳಿವೆ. ಅವುಗಳಲ್ಲಿ 22 ಆಸ್ಪತ್ರೆಗಳ ಮೇಲೆ ಜನರು ದೂರು ಕೊಟ್ಟಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರ ಗಮನಕ್ಕೆ ತಂದಿದ್ದೇನೆ. ಅವರು ಪರಿಶೀಲನೆ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ’ ಎಂದು ತಿಳಿಸಿದ್ದಾರೆ.

‘ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರದ ನಿಯಮಕ್ಕೆ ವಿರುದ್ಧವಾಗಿ ಹೆಚ್ಚು ಬಿಲ್ ಪಡೆಯಲಾಗುತ್ತಿದೆ.‌ ಆ ಬಿಲ್‌ಗಳ ಪರಿಶೀಲನೆ ಆಗಬೇಕು ಮತ್ತು ಹೆಚ್ಚಿಗೆ ಹಣ ಪಡೆದಿರುವುದು ಕಂಡುಬಂದರೆ ಹಣ ಮರಳಿಸುವಂತೆ ಮಾಡಬೇಕು ಎಂದು ಮನವಿ ಸಲ್ಲಿಸಲಾಗಿದೆ. ಆಯುಷ್ಮಾನ್‌ ಭಾರತ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಖಾಸಗಿ ಆಸ್ಪತ್ರೆಗಳು ಉಚಿತವಾಗಿ ಚಿಕಿತ್ಸೆ ನೀಡಲು ಸ್ಪಂದಿಸುತ್ತಿಲ್ಲ ಎಂಬ ದೂರುಗಳೂ ಬಂದಿವೆ. ಅಂತಹ ಪ್ರಕರಣ ಕಂಡುಬಂದರೆ ಕ್ರಮಕ್ಕೆ  ಶಿಫಾರಸು ಮಾಡುವಂತೆ ಮುಖ್ಯಮಂತ್ರಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು