ಶುಕ್ರವಾರ, ಜೂನ್ 25, 2021
29 °C

ಕೋವಿಡ್‌: ಸೋಂಕಿತರಿಗಿಂತ ಗುಣಮುಖರಾದವರ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಜಿಲ್ಲೆಯಲ್ಲಿ ಶನಿವಾರ ಹೊಸದಾಗಿ 312 ಜನರಿಗೆ ಕೋವಿಡ್‌–19 ದೃಢಪಟ್ಟಿದೆ. ಇದೇ ವೇಳೆ, 378 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಸೋಂಕಿತರ ಸಂಖ್ಯೆಗಿಂತ ಗುಣಮುಖರಾದವರ ಸಂಖ್ಯೆಯಲ್ಲಿ ಏರಿಕೆಯಾಗಿದೆ.

ಇದುವರೆಗೆ ಸೋಂಕು ತಗುಲಿದವರ ಸಂಖ್ಯೆ 5,174ಕ್ಕೆ ತಲುಪಿದೆ. ಇವರಲ್ಲಿ 3,431 ಸಕ್ರಿಯ ಪ್ರಕರಣಗಳಿವೆ. ಬೆಳಗಾವಿ, ಗೋಕಾಕ, ಖಾನಾಪುರ, ಸವದತ್ತಿ, ಚಿಕ್ಕೋಡಿ, ರಾಮದುರ್ಗ, ಹುಕ್ಕೇರಿ, ರಾಯಬಾಗ ಸೇರಿದಂತೆ ಬಹುತೇಕ ಜಿಲ್ಲೆಯ ಎಲ್ಲ ಭಾಗಗಳಲ್ಲೂ ಸೋಂಕು ಕಂಡುಬಂದಿದೆ. ಬೆಳಗಾವಿಯ 60 ವರ್ಷದ ವೃದ್ಧೆಯೊಬ್ಬರು (ಪಿ– 157344) ಮೃತರಾಗಿದ್ದು, ಸೋಂಕಿನಿಂದ ಮೃತರಾದವರ ಸಂಖ್ಯೆ 94ಕ್ಕೆ ಏರಿಕೆಯಾಗಿದೆ. 

378 ಜನರು ಚಿಕಿತ್ಸೆಯಿಂದ ಗುಣಮುಖರಾಗಿದ್ದು, ಇದುವರೆಗೆ ಗುಣಮುಖರಾದವರ ಸಂಖ್ಯೆ 1,649ಕ್ಕೆ ತಲುಪಿದೆ. 328 ಜನರ ಮಾದರಿಯ ಫಲಿತಾಂಶ ಇನ್ನೂ ಬರಬೇಕಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು