ಸೋಮವಾರ, ಆಗಸ್ಟ್ 2, 2021
27 °C

ಕೋವಿಡ್‌; 3 ಸಾವು, 137 ಜನರಿಗೆ ಸೋಂಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಕೋವಿಡ್‌–19 ಸೋಂಕಿತರಾದ ಜಿಲ್ಲೆಯ ಮೂರು ಜನರು ಶನಿವಾರ ಮೃತರಾದರು. ಇದರೊಂದಿಗೆ ಇದುವರೆಗೆ ಮೃತರಾದವರ ಸಂಖ್ಯೆ 24ಕ್ಕೆ ತಲುಪಿದೆ. ಹೊಸದಾಗಿ 137 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಸೋಂಕಿತರ ಸಂಖ್ಯೆ 932ಕ್ಕೆ ತಲುಪಿದೆ.

ಬೆಳಗಾವಿ ನಗರದ 53 ವರ್ಷದ ಪುರುಷ (ರೋಗಿಯ ಸಂಖ್ಯೆ– 47453), ಅಥಣಿಯ 70 ವರ್ಷದ ವೃದ್ಧ (ರೋಗಿಯ ಸಂಖ್ಯೆ 48990) ಹಾಗೂ 62 ವರ್ಷದ ವೃದ್ಧೆ ಮೃತರಾಗಿದ್ದಾರೆ.

ಬೆಳಗಾವಿ, ಗೋಕಾಕ, ಅಥಣಿ, ಚಿಕ್ಕೋಡಿ, ರಾಯಬಾಗ, ಸಂಕೇಶ್ವರ, ನಿಪ್ಪಾಣಿ, ಬೈಲಹೊಂಗಲ ಹಾಗೂ ಕುಡಚಿ ಪಟ್ಟಣದ ಒಟ್ಟು 137 ಜನರಿಗೆ ಹೊಸದಾಗಿ ಸೋಂಕು ಕಾಣಿಸಿಕೊಂಡಿದೆ. ಅವರನ್ನು ಚಿಕಿತ್ಸೆಗಾಗಿ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.