ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ!

ಜಿಲ್ಲೆಗೆ ಬೇಡಿಕೆಯಷ್ಟು ಪೂರೈಕೆ ಆಗುತ್ತಿಲ್ಲ ಕೋವಿಡ್ ಲಸಿಕೆ
Last Updated 11 ಮೇ 2021, 19:30 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯಲ್ಲಿ ಕೋವಿಡ್ ರೋಗ ನಿರೋಧಕ ಲಸಿಕೆ ಕೊರತೆ ತೀವ್ರವಾಗಿದೆ.

ಜಾಗೃತಿ ಮೂಡಿದ ಪರಿಣಾಮ ಹಾಗೂ ದಿನೇ ದಿನೇ ಕೋವಿಡ್–19 ಪ್ರಕರಣಗಳು ಹೆಚ್ಚುತ್ತಿರುವುದರಿಂದಾಗಿ ಜನರು ಲಸಿಕೆ ಪಡೆಯುವುದಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರುತ್ತಿದ್ದಾರೆ. ಅದಕ್ಕೆ ತಕ್ಕಂತೆ ಪೂರೈಕೆ ಇಲ್ಲದಿರುವುದು ತೊಡಕಾಗಿ ಪರಿಣಮಿಸಿದೆ. ನೋಂದಾಯಿಸಿದವರು ಅಥವಾ ಸ್ಥಳದಲ್ಲೇ ನೋಂದಾಯಿಸಿ ಪಡೆಯುವುದಕ್ಕೆ ಹೋಗುವವರು ಲಸಿಕೆಗಾಗಿ ಕಾದು ಕಾದು ಬರಿಗೈಲಿ ವಾಪಸಾಗುವುದು ವರದಿಯಾಗುತ್ತಿದೆ. ಲಸಿಕೆ ಇಲ್ಲ ಎಂಬ ಕಾರಣಗಳನ್ನು ಆರೋಗ್ಯ ಕೇಂದ್ರಗಳಲ್ಲಿ ಹೇಳುತ್ತಿರುವುದು ಸಾಮಾನ್ಯವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಬೇಡಿಕೆಗೆ ತಕ್ಕಂತೆ ಸರಬರಾಜು ಇಲ್ಲದಿರುವುದರಿಂದಾಗಿ, ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವಂತಾಗಿದೆ. ಪ್ರಸ್ತುತ 2ನೇಡೋಸ್‌ಗೆ ಮಾತ್ರ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.

ಅದರಲ್ಲೂವೃದ್ಧರುಮತ್ತುಗಂಭೀರಆರೋಗ್ಯತೊಂದರೆಇರುವವರಿಗೆ ಪ್ರಾಶಸ್ತ್ಯ ಕೊಡಲಾಗುತ್ತಿದೆ. ‘ಈಗ ಲಸಿಕೆಲಭ್ಯವಿಲ್ಲ, ಬಂದ ನಂತರತಿಳಿಸಲಾಗುತ್ತದೆ.ಆಗಬನ್ನಿ’ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ ಸಿಬ್ಬಂದಿ ಹೇಳುವುದು ಸಾಮಾನ್ಯವಾಗಿದೆ. 2ನೇಡೋಸ್ ಪಡೆಯುವುದಕ್ಕೆಬರುವವರುಕೂಡಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆವಾಪಸ್ಆಗುವಂತಾಗಿದೆ ಎಂಬ ದೂರುಗಳಿವೆ.

ಅಸಮಾಧಾನ:

ಜಿಲ್ಲೆಯಿಂದ ಲಕ್ಷದಲ್ಲಿ ಬೇಡಿಕೆ ಕಳುಹಿಸಲಾಗುತ್ತಿದೆ. ಆದರೆ, ಪೂರೈಕೆಯು ಸಾವಿರದಲ್ಲಿ ಆಗುತ್ತಿದೆ. ಹೀಗಾಗಿ, ಆಂದೋಲನದ ರೀತಿಯಲ್ಲಿ ಲಸಿಕಾಕರಣವನ್ನು ನಡೆಸುವುದಕ್ಕೆ ಸಾಧ್ಯವಾಗುತ್ತಿಲ್ಲ ಎನ್ನುವ ಅಸಮಾಧಾನದ ಮಾತುಗಳು ಅಧಿಕಾರಿಗಳಿಂದಲೇ ಕೇಳಿಬರುತ್ತಿದೆ.

ದಿನವೊಂದಕ್ಕೆ 30ಸಾವಿರ ಡೋಸ್ ನೀಡುವ ಗುರಿ ಇದೆ. ಆದರೆ, ಸಾಧನೆ ಆಗುತ್ತಿರುವುದು ಸರಾಸರಿ 8,400 ಮಾತ್ರ! ಅಲಭ್ಯತೆಯು ಅಧಿಕಾರಿಗಳ ಕೈಕಟ್ಟಿ ಹಾಕಿದೆ.

ಆರೋಗ್ಯ ಇಲಾಖೆಯ ಅಂಕಿ–ಅಂಶ ಗಮನಿಸಿದರೆ, ಮೇ 4ರಿಂದ ಮೇ 10ರವರೆಗೆ ಅಂದರೆ 7 ದಿನಗಳಲ್ಲಿ ಸರ್ಕಾರದಿಂದ ಪೂರೈಕೆಯು ಕುಸಿದಿದ್ದರಿಂದಾಗಿ ಲಸಿಕೆ ನೀಡಿಕೆ ಪ್ರಮಾಣದಲ್ಲೂ ಏರಿಕೆ ಕಂಡುಬಂದಿಲ್ಲ. ಈ ಅವಧಿಯಲ್ಲಿ ಕೇವಲ 35,063 ಮಂದಿಗಷ್ಟೆ ಲಸಿಕೆ ನೀಡಲಾಗಿದೆ. ಮೇ 6ರಂದು ಅತಿ ಹೆಚ್ಚು ಅಂದರೆ 12,042 ಹಾಗೂ ಮೇ 4ರಂದು ಅತಿ ಕಡಿಮೆ ಅಂದರೆ 642 ಮಂದಿಗೆ ಕೊಡಲಾಗಿದೆ. 60 ವರ್ಷ ಮೇಲಿನವರಲ್ಲಿ 17,253 ಮಂದಿಗೆ ನೀಡಲಾಗಿದೆ. 18ರಿಂದ 44 ವರ್ಷದವರಿಗೆ ಮೊದಲ ಡೋಸ್ ಪ್ರಕ್ರಿಯೆಯನ್ನು ಸೋಮವಾರ ಆರಂಭಿಸಲಾಗಿದ್ದು, ಅಂದು 175 ಮಂದಿಗಷ್ಟೆ ಸಿಕ್ಕಿದೆ.

ನೋಂದಣಿ ಹೆಚ್ಚು

ಜಿಲ್ಲೆಯಲ್ಲಿ ಮೊದಲ ಹಾಗೂ 2ನೇ ಡೋಸ್ ಸೇರಿ ಒಟ್ಟು 38,71,525 (18 ವರ್ಷ ಮೇಲಿನವರು) ಮಂದಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಈ ಪೈಕಿ ಮೇ 10ರವರೆಗೆ 6,55,051 ಮಂದಿಗೆ ಕೊಡಲಾಗಿದೆ. ಶೇ 16.92ರಷ್ಟು ಗುರಿ ಸಾಧನೆಯಷ್ಟೆ ಆಗಿದೆ. ಈ ಪೈಕಿ ಈವರೆಗೆ 6,33,800 ಕೋವಿಶೀಲ್ಡ್‌ ಹಾಗೂ 20,779 ಕೋವ್ಯಾಕ್ಸಿನ್‌ ನೀಡಲಾಗಿದೆ.

ಲಸಿಕೆಗಾಗಿ 18ರಿಂದ44 ವರ್ಷಒಳಗಿನವರು ಸಹಸ್ರಾರು ಸಂಖ್ಯೆಯಲ್ಲಿ ನೋಂದಾಯಿಸಿದ್ದಾರೆ. ಆದರೆ, ಅವರಿಗಾಗಿ 11ಸಾವಿರ ಡೋಸ್‌ ಮಾತ್ರವೇ ಪೂರೈಕೆಯಾಗಿದೆ.

ಮಂಗಳವಾರದವರೆಗೆ 2,690 ಡೋಸ್ ಕೋವ್ಯಾಕ್ಸಿನ್, 23,120 ಡೋಸ್ ಕೋವಿಶೀಲ್ಡ್ ಹಾಗೂ 11ಸಾವಿರ ಡೋಸ್ ರಾಜ್ಯದಿಂದ ಹಂಚಿಕೆ ಆಗಿರುವುದು (18ರಿಂದ 44 ವರ್ಷದವರಿಗೆ) ಸೇರಿ ಒಟ್ಟು 36,810 ಡೋಸ್ ಲಸಿಕೆ ಲಭ್ಯವಿದೆ. ಇದು ಒಂದೆರಡು ದಿನಗಳಲ್ಲಿ ಖಾಲಿ ಆಗುವ ಸಾಧ್ಯತೆ ಇದೆ.

ಬಿಮ್ಸ್‌ನಲ್ಲಿ ಲಸಿಕೆಗಾಗಿ 18ರಿಂದ 44 ವರ್ಷದೊಳಗಿನವರು (ಆನ್‌ಲೈನ್‌ನಲ್ಲಿ ನೋಂದಾಯಿಸಿದವರು) ಮಂಗಳವಾರ ಬೆಳಿಗ್ಗೆ 7ಕ್ಕೇ ಸರದಿ ಸಾಲಿನಲ್ಲಿ ಬಂದು ನಿಂತಿದ್ದರು. ಆದರೆ, ನಿಗದಿತ ಸಮಯಕ್ಕೆ ಅವರಿಗೆ ಸಿಗಲಿಲ್ಲ. ಹಲವು ಗಂಟೆಗಳ ಬಳಿಕ ದೊರೆತಿದೆ.

ಸರ್ಕಾರಕ್ಕೆ ಆಗಾಗ ಬೇಡಿಕೆ ಸಲ್ಲಿಸುತ್ತಿದ್ದೇವೆ. ಪೂರೈಕೆ ಆಗುವುದನ್ನು ಎಲ್ಲ ಕಡೆಗೂ ವಿತರಿಸುತ್ತಿದ್ದೇವೆ. ಹಂತ ಹಂತವಾಗಿ ಸರಬರಾಜಾಗುತ್ತಿದೆ.
ಡಾ.ಎಸ್.ವಿ. ಮುನ್ಯಾಳ
ಡಿಎಚ್‌ಒ

ಲಸಿಕೆ ನೀಡಿಕೆಯಲ್ಲಿ ಜಿಲ್ಲೆಗೆ ತಾರತಮ್ಯ ಮಾಡಲಾಗುತ್ತಿದೆ. ಇದು ಸರಿಯಲ್ಲ. ಜನಸಂಖ್ಯೆಗೆ ತಕ್ಕಂತೆ ಹಂಚಿಕೆ ಪ್ರಮಾಣವನ್ನು ಹೆಚ್ಚಿಸಬೇಕು.
ಸತೀಶ ಜಾರಕಿಹೊಳಿ
ಶಾಸಕ, ಯಮಕನಮರಡಿ

ಅಂಕಿ ಅಂಶ

5,40,445

ಜಿಲ್ಲೆಯಲ್ಲಿ ಮೊದಲ ಡೋಸ್ ಪಡೆದವರು

11,46,06

2ನೇ ಡೋಸ್ ಪಡೆದವರು

30,000

ದಿನದ ಗುರಿ

8,400

ಸಾಧಿಸುತ್ತಿರುವ ಸರಾಸರಿ ಗುರಿ ಸಾಧನೆ

ಶೇ 28

ಪ್ರತಿದಿನ ಆಗುತ್ತಿರುವ ಸಾಧನೆ ಪ್ರಮಾಣ

36,81‌0

ಲಭ್ಯವಿರುವ ಲಸಿಕೆ ಡೋಸ್‌ಗಳು

(ಆಧಾರ: ಆರೋಗ್ಯ ಇಲಾಖೆ, ಮೇ 10ರವರೆಗಿನ ಮಾಹಿತಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT