ಸೋಮವಾರ, ಆಗಸ್ಟ್ 2, 2021
23 °C

ಕೋವಿಡ್‌–19ಗೆ ಜಿಲ್ಲೆಯಲ್ಲಿ ನಾಲ್ಕನೇ ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಕೋವಿಡ್‌–19 ಜಿಲ್ಲೆಯಲ್ಲಿ ನಾಲ್ಕನೇ ಬಲಿ ಪಡೆದುಕೊಂಡಿದೆ. ತೀವ್ರ ಉಸಿರಾಟದ ತೊಂದರೆಯಿಂದ ಸಾವಿಗೀಡಾಗಿರುವ 45 ವರ್ಷದ ವ್ಯಕ್ತಿಯಲ್ಲಿ ಕೋವಿಡ್‌–19 ಸೋಂಕು ದೃಢಪಟ್ಟಿದೆ. ಇವರ ಜೊತೆ ಎಂಟು ವರ್ಷದ ಬಾಲಕಿ ಸೇರಿದಂತೆ ಏಳು ಜನ ಪುರುಷರಲ್ಲಿ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರಾದವರ ಸಂಖ್ಯೆ 337ಕ್ಕೆ ತಲುಪಿದೆ.

ಕೇರಳದಿಂದ ಬಂದಿರುವ 27 ವರ್ಷದ ಪಿ–16960, ಮಹಾರಾಷ್ಟ್ರದಿಂದ ಬಂದಿರುವ 35 ವರ್ಷದ ಪಿ–16961, ಗುಜರಾತ್‌ನಿಂದ ಬಂದಿರುವ 54 ವರ್ಷದ ಪಿ–16962 ಹಾಗೂ ಮಹಾರಾಷ್ಟ್ರದಿಂದ ಬಂದಿರುವ 52 ವರ್ಷದ ಪಿ–16963 ಅವರಲ್ಲಿ ಸೋಂಕು ದೃಢಪಟ್ಟಿದೆ. 46 ವರ್ಷದ ವ್ಯಕ್ತಿ (ಪಿ–17021) ಹಾಗೂ 8 ವರ್ಷದ ಬಾಲಕಿ (ಪಿ–17022) ಅವರಲ್ಲಿಯೂ ಸೋಂಕು ಕಾಣಿಸಿಕೊಂಡಿದೆ. ಇವರ ಸಂಪರ್ಕದ ಹಿನ್ನೆಲೆ ಗೊತ್ತಾಗಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು