ಬೆಳಗಾವಿ: ‘ಹೆಣ್ಣು ಶಿಶು ಮಾರಾಟಕ್ಕೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಎಲ್ಲ ಆಯಾಮಗಳಿಂದಲೂ ತನಿಖೆ ಮಾಡುತ್ತಿದ್ದೇವೆ’ ಎಂದು ನಗರ ಪೊಲೀಸ್ ಕಮಿಷನರ್ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಹೇಳಿದರು.

ಇಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನರ್ಸಿಂಗ್ ಕೆಲಸ ಮಾಡುತ್ತಿರುವ ಮಹಾದೇವಿ ಜೈನರ ಅವರು, 30 ದಿನಗಳ ಶಿಶುವನ್ನು ಬೆಳಗಾವಿಗೆ ಕರೆತರುವಾಗ ರಕ್ಷಿಸಲಾಗಿದೆ. ವೈದ್ಯ ಎಂದು ಹೇಳಿಕೊಂಡ ಅಬ್ದುಲ್ಗಫಾರ್ ಲಾಡಖಾನ್ ತಮ್ಮ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿದ್ದಾರೆ. ಈ ಪ್ರಕರಣದಲ್ಲಿ ಐವರು ಆರೋಪಿಗಳನ್ನು ಬಂಧಿಸಿದ್ದು, ಅವರ ಸಮಗ್ರ ಮಾಹಿತಿ ಕಲೆಹಾಕುತ್ತಿದ್ದೇವೆ. ಈ ಹಿಂದೆಯೂ ಇಂಥ ಪ್ರಕರಣ ನಡೆದಿವೆಯೇ ಎಂದೂ ತನಿಖೆ ಮಾಡುತ್ತಿದ್ದೇವೆ’ ಎಂದರು.

‘₹1.40 ಲಕ್ಷಕ್ಕೆ ಮಗು ಮಾರಾಟ ಯತ್ನಿಸಿದ್ದಾರೆ ಎಂದು ಗೊತ್ತಾಗಿದೆ. ಆದರೆ, ಪೂರ್ಣ ತನಿಖೆ ಬಳಿಕವೇ ನೈಜವಾದ ಸತ್ಯ ಹೊರಬರಲಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.