ಮಂಗಳವಾರ, ಜನವರಿ 31, 2023
27 °C

ಬೆಳಗಾವಿ | ಘಟಪ್ರಭಾ ನದಿಯ ದಡದ ಮೇಲಿನ ಬಾವಿಯಲ್ಲಿ ಮೊಸಳೆ ಮರಿ ಪ್ರತ್ಯಕ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾವಳಗಿ: ಗೋಕಾಕ ತಾಲ್ಲೂಕಿನ ಸಾವಳಗಿ ಗ್ರಾಮದ ಹೊರವಲಯದ ಘಟಪ್ರಭಾ ನದಿಯ ದಡದ ಮೇಲಿನ ಬಾವಿಯಲ್ಲಿ ಮೊಸಳೆ ಮರಿ ಕಾಣಿಸಿಕೊಂಡಿದ್ದು ರೈತರಲ್ಲಿ ಆತಂಕ ಮೂಡಿಸಿದೆ.

ಶಿವಲಿಂಗಪ್ಪ ಬಸವರಾಜ ಕೊಟಬಾಗಿ ಎಂಬುವರ ಪಾಳು ಬಾವಿಯಲ್ಲಿ ಮೊಸಳೆ ಮರಿ ಪ್ರತ್ಯಕವಾಗಿದೆ. ದೃಶ್ಯ ಮೊಸಳೆಯನ್ನು ಕಂಡು ಸ್ಥಳೀಯರು ಭಯಭೀತರಾಗಿದ್ದಾರೆ. ಇದು ಮರಿಯಾದ್ದರಿಂದ ತಾಯಿ ಮೊಸಳೆ ಕೂಡ ಇದೇ ಸ್ಥಳದಲ್ಲಿ ಇರಬಹುದು ಎಂಬ ಆತಂಕ ಎದುರಾಗಿದೆ.

2019ರಲ್ಲಿ ಘಟಪ್ರಭಾ ನದಿಗೆ ಬಂದ ಪ್ರವಾಹದ ಸಂದರ್ಭದಲ್ಲಿ ಮೊಸಳೆಗಳು ಈ ಭಾಗಕ್ಕೆ ಬಂದವು. ಆಗಿನಿಂದ ಮೇಲಿಂದ ಮೇಲೆ ಮೊಸಳೆಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಂಡ ಮೊಸಳೆ ಸ್ಥಳಾಂತರಿಸಬೇಕು ಎಂದು ಗ್ರಾಮಸ್ಥ ಉಮೇಶ ನಂದಗಾಂವ ಆಗ್ರಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು