ಮೂಡಲಗಿ: ತಾಲ್ಲೂಕಿನ ಶಿವಾಪುರ (ಹ) ಸಂಸದರ ಆದರ್ಶ ಗ್ರಾಮದಲ್ಲಿ ಹಿಂದೂಸ್ತಾನ ಪೆಟ್ರೋಲಿಯಂ ಕಾರ್ಪೊರೇಶನ್ನ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್ಆರ್) ಯೋಜನೆ ಅಡಿಯಲ್ಲಿ ಮಂಜೂರಾದ ₹19 ಲಕ್ಷದಲ್ಲಿ ಶಾಲಾ ಸಲಕರಣೆಗಳನ್ನು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಶನಿವಾರ ವಿತರಿಸಿದರು.

ಶಿವಾಪುರ (ಹ) ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಶಾಲೆಗಳಾದ ಸರ್ಕಾರಿ ಪ್ರೌಢ ಶಾಲೆಗೆ ₹4.68 ಲಕ್ಷ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ₹4.37 ಲಕ್ಷ, ಸೀಮವ್ವ ಗುಡಿ ತೋಟ 2ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ₹3.39 ಲಕ್ಷ, ಮಡ್ಡಿ ತೋಟ–1ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ₹3.57ಲಕ್ಷ , ಮದಲಮಟ್ಟಿ ತೋಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ₹3.1 ಲಕ್ಷ ಶೈಕ್ಷಣಿಕ ಸಲಕರಣೆಗಳನ್ನು ವಿತರಿಸಲಾಗಿದೆ ಎಂದು ಕಡಾಡಿ ಅವರು ಹೇಳಿದರು.

ಶಿವಾಪುರ ಗ್ರಾಮಕ್ಕೆ ಸಂಸದರ ಸ್ಥಳೀಯ ಕ್ಷೇತ್ರಾಭಿವೃದ್ಧಿ ಯೋಜನೆಯಡಿಯಲ್ಲಿ ಈಗಾಗಲೇ ₹1 ಕೋಟಿಗೂ ಅಧಿಕ ಅನುದಾನವನ್ನು ನೀಡಲಾಗಿದೆ. ಯುವಕರ ಅನುಕೂಲಕ್ಕಾಗಿ ಗ್ರಾಮದಲ್ಲಿ ಓಪನ್ ಜಿಮ್ ಕೊಡುವುದಾಗಿ ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ ಹಿರೇಮಠ ಹಾಗೂ ಸಾನ್ನಿಧ್ಯವಹಿಸಿದ್ದ ಅಡವಿಸಿದ್ದೇಶ್ವರ ಸ್ವಾಮೀಜಿ ಮಾತನಾಡಿದರು.

ಎಚ್ಪಿಸಿ ಬೆಳಗಾವಿ ವಿಭಾಗದ ಮುಖ್ಯ ಪ್ರಾದೇಶಿಕ ವ್ಯವಸ್ಥಾಪಕ ವಿನಯಕಾಂತ ಅಬಿಗೇರಿ, ಮಾರಾಟಾಧಿಕಾರಿ ಸಾಯಿ ಚರಣ, ಮಲಗೌಡ ಪಾಟೀಲ, ಈಶ್ವರ ಬೆಳಗಲಿ, ಕೆಂಪಣ್ಣ ಮುಧೋಳ, ಶಿವಬಸು ಜುಂಜರವಾಡ, ಶಿವಬಸು ಬೆಳಗಲಿ, ಅಜ್ಜಪ್ಪ ಬೆಂಡವಾಡ, ಶೇಖರಪ್ಪ ರಡೆರಟ್ಟಿ, ಶಿವಬಸು ತುಕ್ಕನವರ, ಮಹಾದೇವ ಬೆಳಗಲಿ, ಮಲ್ಲಪ್ಪ ಜುಂಜರವಾಡ, ಸುಭಾಷ ಸೋನವಾಲಕರ, ಬಸವರಾಜ ಮದಲಮಟ್ಟಿ, ಶ್ರೀಕಾಂತ ಕೌಜಲಗಿ, ಬಸವರಾಜ ಸಾಯನ್ನವರ, ಮಹಾಂತೇಶ ಕುಡಚಿ, ಪಿಡಿಒ ಬಬಲಿ, ಈರಯ್ಯ ಹಿರೇಮಠ, ನಿರ್ವಾಣಿ ಹೆಬ್ಬಾರ, ಪರಪ್ಪ ಗಿರೆಣ್ಣವರ, ಲಕ್ಕಪ್ಪ ಕಬ್ಬೂರ ಇದ್ದರು.

ಮಕ್ಕಳಿಗೆ ಶಿಕ್ಷಣದ ಜೊತೆಗೆ ಉತ್ತಮ ನಡತೆ ಸಂಸ್ಕಾರ ಕೊಟ್ಟು ಅವರನ್ನು ದೇಶದ ಸತ್ಪ್ರಜೆಗಳನ್ನಾಗಿಸುವ ನಿಟ್ಟಿನಲ್ಲಿ ಪಾಲಕರು ಜವಾಬ್ದಾರಿ ವಹಿಸಬೇಕು
ಈರಣ್ಣ ಕಡಾಡಿ ರಾಜ್ಯಸಭಾ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.