ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

8 ಮತಕ್ಷೇತ್ರದಲ್ಲಿ ಅಭಿವೃದ್ಧಿ: ಪ್ರಿಯಾಂಕ ಜಾರಕಿಹೊಳಿ

Published : 4 ಸೆಪ್ಟೆಂಬರ್ 2024, 13:26 IST
Last Updated : 4 ಸೆಪ್ಟೆಂಬರ್ 2024, 13:26 IST
ಫಾಲೋ ಮಾಡಿ
Comments

ಯಮಕನಮರಡಿ: ‘ಮತಕ್ಷೇತ್ರದಲ್ಲಿ ಕಳೆದ 15ವರ್ಷದಲ್ಲಿ ನನ್ನ ತಂದೆ ಸತೀಶ ಜಾರಕಿಹೊಳಿ ಬಹಳಷ್ಟು ಅಭಿವೃದ್ದಿ ಕಾರ್ಯ ಮಾಡಿದ್ದಾರೆ. ಅವರ ಮಾರ್ಗದರ್ಶನದಲ್ಲಿ 8 ಮತಕ್ಷೇತ್ರದಲ್ಲಿ ಅಭಿವೃದ್ದಿ ಮಾಡುವೆ’ ಎಂದು ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.

ಸಮೀಪದ ಉಳ್ಳಾಗಡ್ಡಿ ಖಾನಾಪೂರದ ರಾಷ್ಟ್ರೀಯ ಹೆದ್ದಾರಿ 4ರಿಂದ ಉ.ಖಾನಾಪೂರ ಗ್ರಾಮದ ಪ್ರಮುಖ ರಸ್ತೆ ಸುಧಾರಣೆಗೆ ಲೋಕೋಪಯೋಗಿ ಇಲಾಖೆಯಿಂದ ₹1ಕೋಟಿ ವೆಚ್ಚದ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಬುಧವಾರ  ಚಾಲನೆ ನೀಡಿ ಮಾತನಾಡಿದರು.

ಉ.ಖಾನಾಪೂರ ಗ್ರಾಮದ ರೈತನಿಗೆ ಅಪ್ಪಣ್ಣಾ ಗಿರಿಮಲ್ಲನವರ ಮಾತನಾಡಿ ಉಳ್ಳಾಗಡ್ಡಿ ಖಾನಾಪೂರದ ಗ್ರಾಮದಲ್ಲಿ ಹೊರವಲಯದಲ್ಲಿರುವ (ಕಡಿ)ಕೃಷರ್ ಮಷೀನ್‌ಗಳಿಂದ ದೂಳು ಉಂಟಾಗಿ  ಉತ್ತಮ ಬೆಳೆ ಬರುತ್ತಿಲ್ಲ. ಸಾರ್ವಜನಿಕರ ಹಾಗೂ ಚಿಕ್ಕಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಅವುಗಳನ್ನು ಸ್ಥಗಿತಗೊಳಿಸಿ ಎಂದು ಸಭೆಯಲ್ಲಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಮನವಿ ಮಾಡಿದರು.

ನಂತರ  ಪಾಶ್ವನಾಥ ಮಂದಿರ ಹಾಗೂ ಮರುಳಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು.

ಉ.ಖಾನಾಪೂರ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಡಿ.ಪಾಟೀಲ, ಕಾಂಗ್ರೆಸ್‌ನ ಯುವ ಮುಖಂಡ ರಾಜು ಅವಟೆ, ಉ.ಖಾನಾಪೂರ ಪಿಕೆಪಿಎಸ್ ಅಧ್ಯಕ್ಷ ಮಹಾರುದ್ರ ಜರಳಿ, ಸುಧೀರ ಗಿರಿಗೌಡರ, ರಾಜು ಧರಶೆಟ್ಟಿ, ಬಸೀರ ಲಾಡಖಾನ್, ಮುರಗೇಶ ಹಿರೇಮಠ ಸೇರಿದಂತೆ ಅನೇಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT