ವಿಪತ್ತು ನಿರ್ವಹಣೆ: ಸ್ವಯಂ ಸೇವಕರಿಗೆ ತರಬೇತಿ

ಅಥಣಿ: ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಟ್ರಸ್ಟ್‌ನ ಇಲ್ಲಿನ ಶಾಖೆಯಿಂದ ವಿಪತ್ತು ನಿರ್ವಹಣೆ ಕುರಿತು ತಾಲ್ಲೂಕಿನ ಮುರುಗುಂಡಿ ಮುರಸಿದ್ದೇಶ್ವರ ದೇವಾಲಯದಲ್ಲಿ ಸ್ವಯಂ ಸೇವಕರಿಗೆ ತರಬೇತಿ ಶಿಬಿರ ನಡೆಸಲಾಯಿತು.
ತಹಶೀಲ್ದಾರ್ ದುಂಡಪ್ಪ ಕೋಮಾರ ಉದ್ಘಾಟಿಸಿ ಮಾತನಾಡಿ, ‘ಸರ್ಕಾರದೊಂದಿಗೆ ಸಂಘ ಸಂಸ್ಥೆಗಳು ಸ್ವಯಂಸೇವಕರ ಮೂಲಕ ಕೈ ಜೋಡಿಸಿದರೆ ವಿಪತ್ತನ್ನು ಸುಲಭವಾಗಿ ನಿರ್ವಹಿಸಬಹುದು’ ಎಂದರು.
‘ತಾಲ್ಲೂಕಿನಲ್ಲಿ ಪ್ರತಿ ವರ್ಷ ನೆರೆ ಹಾವಳಿ ಕಾಡುತ್ತಿರುತ್ತದೆ. ಆಗ ಎನ್‌ಡಿಆರ್‌ಎಫ್, ಪೊಲೀಸರು, ಸೈನ್ಯದವರು ಬಂದು ತಲುಪವರಿಗೆ ಸಾಕಷ್ಟು ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಮಹಾಪೂರ ಹೆಚ್ಚುವ ಮುನ್ನವೇ ಸ್ವಯಂಸೇವಕರು ಜನರಲ್ಲಿ ಅರಿವು ಮೂಡಿಸಿ ಅವರನ್ನು ಸ್ಥಳಾಂತರಿಸಿದರೆ ಸಮಸ್ಯೆಯನ್ನು ಸರಳವಾಗಿ ನಿರ್ವಹಿಸಬಹುದು’ ಎಂದು ಹೇಳಿದರು.
ಪಿಎಸ್ಐ ಕುಮಾರ ಹಾಡಗರ, ಸಂಜಯ ನಾಡಗೌಡರ, ಟಿ. ಕೃಷ್ಣಪ್ಪ, ರಾಜು ನಾಯಕ, ಬಸವಣೆಪ್ಪ ತುಪ್ಪದ, ಭೀಮಪ್ಪ ಸಡ್ಡಿ, ಶೋಭಾ ಪತ್ತಾರ, ಮಂಗಲಾ ಪ್ರಜಾರಿ, ಪಿಡಿಒ ಅಚ್ಯುತ ಕುಲಕರ್ಣಿ, ವಿವೇಕ್, ಹೋಳೆಪ್ಪ ಪ್ರಜಾರಿ, ದುಗ್ಗೇಗೌಡ ಇದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.