ಬೆಳಗಾವಿ: ನಿಯಮ ಮೀರಿ ಸಂಚರಿಸುವ ವಾಹನಗಳ ವಿರುದ್ಧ ವಿಶೇಷ ಕಾರ್ಯಾಚರಣೆ ಮುಂದುವರಿಸಿರುವ ಸಂಚಾರ ಪೊಲೀಸರು, ಪ್ರಕರಣ ದಾಖಲಿಸಿ ದಂಡ ವಿಧಿಸುವುದಲ್ಲದೇ ಡಿಎಲ್ (ಚಾಲನಾ ಪರವಾನಗಿ) ಹಾಗೂ ಆರ್ಸಿ ಅಮಾನತಿನಂತಹ ಗಂಭೀರ ಕ್ರಮಗಳನ್ನು ಕೈಗೊಳ್ಳಲು ಆರಂಭಿಸಿದ್ದಾರೆ.

‘ನಗರದಲ್ಲಿ ಆಟೊರಿಕ್ಷಾ, ಬಸ್, ಮಿನಿ ಬಸ್ಗಳಲ್ಲಿ ನಿಗದಿಗಿಂತ ಹೆಚ್ಚು ಶಾಲಾ ಮಕ್ಕಳನ್ನು ಸಾಗಿಸುವ ಹಾಗೂ ಸರಕು ವಾಹನಗಳಲ್ಲಿ ಕಾರ್ಮಿಕರನ್ನು ಸಾಗಿಸುವ ವಾಹನಗಳ ವಿರುದ್ಧ ಕ್ರಮ ವಹಿಸಲಾಗುತ್ತಿದೆ. ತಪ್ಪಿತಸ್ಥ ವಾಹನ ಚಾಲಕರ ವಿರುದ್ಧ ಮೋಟರ್ ವಾಹನ ಕಾಯ್ದೆಯಡಿ 109 ಪ್ರಕರಣಗಳನ್ನು ದಾಖಲಿಸಿ ₹ 17,100 ಹಾಗೂ ಇತರ ಸಂಚಾರ ನಿಯಮ ಉಲ್ಲಂಘಿಸಿದವರ ವಿರುದ್ 17 ಪ್ರಕರಣಗಳನ್ನು ದಾಖಲಿಸಿ ₹ 1,500 ದಂಡ ವಸೂಲಿ ಮಾಡಲಾಗಿದೆ. ತಪ್ಪಿತಸ್ಥ 11 ಚಾಲಕ, ಮಾಲೀಕರ ಡಿಎಲ್, ಆರ್ಸಿ ಅಮಾನತುಗೊಳಿಸಲು ಸಾರಿಗೆ ಇಲಾಖೆಗೆ ಕಳುಹಿಸಲಾಗಿದೆ’ ಎಂದು ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ್ಕುಮಾರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.