ಸೋಮವಾರ, ಸೆಪ್ಟೆಂಬರ್ 28, 2020
28 °C

ಬೆಳಗಾವಿ: ಯಜಮಾನನ ನೆನಪಲ್ಲೇ ಕೊನೆಯುಸಿರೆಳೆದ ಶ್ವಾನ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೂಡಲಗಿ: ತನ್ನ ಯಜಮಾನನ ಸಾವಿನ ನೋವಿನಲ್ಲಿ ಅನ್ನ–ನೀರು ಬಿಟ್ಟಿದ್ದ ಶ್ವಾನ ಸೋಮವಾರ ಕೊನೆಯುಸಿರೆಳೆದ ಮನಕಲಕುವ ಘಟನೆ ತಾಲ್ಲೂಕಿನ ಅವರಾದಿಯಲ್ಲಿ ನಡೆದಿದೆ.

ಹಾಲು ಮಾರುವ ಶಂಕರೆಪ್ಪ ಮಡಿವಾಳರ (47) ಸೆ. 6ರಂದು (ಸೋಮವಾರ) ಹೃದಯಘಾತದಿಂದ ನಿಧನರಾದರು. ಮನೆಯವರೊಂದಿಗೆ, ಅವರು ಪ್ರೀತಿಯಿಂದ ಸಾಕಿದ್ದ   ನಾಯಿಯೂ ದುಃಖಿಸುತ್ತಿತ್ತು. ಸಮಾಧಿ ಬಳಿಗೆ ಹೋಗಿ ಕಣ್ಣೀರಿಡುತ್ತಿತ್ತು. ಶ್ವಾನದ ಪ್ರೀತಿ ಕಂಡು ಜನರೂ ಮರುಗಿದರು.

ಶಂಕರೆಪ್ಪನ ಮನೆಯವರು ಮತ್ತು ಗ್ರಾಮದ ಜನರು ನಾಯಿಗೆ ಆಹಾರ ತಿನ್ನಿಸಲು ನಡೆಸಿದ ಪ್ರಯತ್ನ ವಿಫಲವಾಗಿತ್ತು. ತನ್ನ ಯಜಮಾನ ಗ್ರಾಮದಿಂದ 6 ಕಿ.ಮೀ. ದೂರದಲ್ಲಿರುವ ಮಹಾಲಿಂಗಪೂರದ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಶ್ವಾನವೂ ಮಹಾಲಿಂಗಪೂರಕ್ಕೆ ಓಡಿ ಹೋಗಿ ಆಸ್ಪತ್ರೆಯ ರಸ್ತೆಯಲ್ಲಿ ಪ್ರಾಣ ಬಿಟ್ಟಿದೆ. ಗ್ರಾಮದ ವ್ಯಕ್ತಿಯೊಬ್ಬರು ಅದನ್ನು ಗುರುತಿಸಿ ಗ್ರಾಮಕ್ಕೆ ತಂದಿದ್ದರು.

ಹೂಮಾಲೆ ಹಾಕಿ ಸಿಂಗರಿಸಿದ ಬಂಡಿಯಲ್ಲಿ ಊರೆಲ್ಲ ಮೆರವಣಿಗೆ ಮಾಡಿ, ಶಂಕರೆಪ್ಪನ ಸಮಾಧಿಯ ಪಕ್ಕದಲ್ಲಿಯೇ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು