ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಕಚೇರಿಗೆ ಬರಬೇಡಿ, ದೂರವಾಣಿ ಸಂಪರ್ಕಿಸಿ

ಜಿಲ್ಲಾ ಪಂಚಾಯಿತಿಯಿಂದ ಮನವಿ
Last Updated 20 ಮಾರ್ಚ್ 2020, 14:35 IST
ಅಕ್ಷರ ಗಾತ್ರ

ಬೆಳಗಾವಿ: ‘ಜಿಲ್ಲೆಯಲ್ಲಿ ಕೊರೊನಾ ವೈರಾಣು ಹರಡುವ ಅಪಾಯಕಾರಿ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ದೃಷ್ಟಿಯಿಂದ, ಸಾರ್ವಜನಿಕ ಸ್ಥಳಗಳು ಹಾಗೂ ಖಾಸಗಿ ಕಾರ್ಯಕ್ರಮಗಳಲ್ಲಿ ಜನದಟ್ಟಣೆ ನಿಯಂತ್ರಿಸಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.

‘ತುರ್ತು ಸಂದರ್ಭದಲ್ಲಿ ಅಗತ್ಯ ಸೇವೆಗಳನ್ನು ಒದಗಿಸಲು ಸಾರ್ವಜನಿಕ ಕಚೇರಿಗಳ ಕಾರ್ಯನಿರ್ವಹಣೆಗೆ ನಿರ್ಬಂಧ ವಿಧಿಸಿಲ್ಲ. ತುರ್ತಿಲ್ಲದ ಕೆಲಸಗಳಿಗೂ ಜನರು ಕಚೇರಿಗೆ ಬರುವುದು ಮತ್ತು ಗುಂಪಿನಲ್ಲಿ ಬಂದು ಮನವಿಗಳನ್ನು ನೀಡುತ್ತಿರುವುದು ಗಮನಕ್ಕೆ ಬಂದಿದೆ. ಈ ರೀತಿಯ ಬೆಳವಣಿಗೆಗಳು ಸೋಂಕು ತಡೆಗಟ್ಟಲು ಮಾರಕವಾಗಿದೆ. ಹೀಗಾಗಿ, ಭೇಟಿ ಕೊಡುವುದನ್ನು ತಾತ್ಕಾಲಿಕವಾಗಿ ಕೈಬಿಟ್ಟು ದೂರವಾಣಿ ಸಂಪರ್ಕಿಸಿ ಅಹವಾಲುಗಳನ್ನು ಸಲ್ಲಿಸಬೇಕು’ ಎಂದು ಕೋರಿದ್ದಾರೆ.

ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು

* ಜಿಲ್ಲಾ ಪಂಚಾಯಿತಿ ಕಚೇರಿ: 0831– 2407212, 2407213, 2407210, 2407208

* ತಾಲ್ಲೂಕು ಪಂಚಾಯಿತಿ ಇಒ ಕಚೇರಿಗಳು

ಬೆಳಗಾವಿ: 0831 -2407229

ಖಾನಾಪುರ: 08336-222229, 223593

ಬೈಲಹೊಂಗಲ: 08288-233187

ಸವದತ್ತಿ: 08330-222354, 223886

ರಾಮದುರ್ಗ: 08335-242137

ಹುಕ್ಕೇರಿ: 08333-265037

ಗೋಕಾಕ: 08332-225063

ಚಿಕ್ಕೋಡಿ: 08338-272139

ರಾಯಬಾಗ: 08331-225670

ಅಥಣಿ:08289-251141

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT