ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರಿಗೆ ಬಸ್‌ಗೆ ಪೂಜೆ ಸಲ್ಲಿಸಿ ನಿವೃತ್ತಿ ಹೊಂದಿದ ಚಾಲಕ ಬಿ.ಎಸ್.ತೋಟಗಿ

Published 30 ಜೂನ್ 2023, 13:39 IST
Last Updated 30 ಜೂನ್ 2023, 13:39 IST
ಅಕ್ಷರ ಗಾತ್ರ

ಬೈಲಹೊಂಗಲ: ಪಟ್ಟಣದ ಕೇಂದ್ರ ಬಸ್ ನಿಲ್ದಾಣದ ವಾಯವ್ಯ ರಸ್ತೆ ಸಾರಿಗೆ ಘಟಕದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಬಸ್ ಚಾಲಕ ಬಿ.ಎಸ್.ತೋಟಗಿ ಅವರ ಸತ್ಕಾರ ಸಮಾರಂಭ ಶುಕ್ರವಾರ ಅದ್ಧೂರಿಯಾಗಿ ನಡೆಯಿತು.

ಘಟಕದ ಸಿಬ್ಬಂದಿ, ಸ್ನೇಹಿತರು, ಕುಟುಂಬಸ್ಥರು ಹೂಗುಚ್ಚ ನೀಡಿ ಆತ್ಮೀಯ ಸತ್ಕರಿಸಿದರು. ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯೆ ರೋಹಿಣಿ ಪಾಟೀಲ, ಪ್ರಾಚಾರ್ಯ ಡಾ.ಸಿ.ಬಿ.ಗಣಾಚಾರಿ, ಪ್ರೊ.ಎಸ್.ಬಿ.ತಲ್ಲೂರ, ನಿವೃತ್ತ ದೈಹಿಕ ಶಿಕ್ಷಕ ಬಸವರಾಜ ಭರಮನ್ನವರ ಮಾತನಾಡಿದರು. ನಿವೃತ್ತಿ ಹೊಂದಿದ ಬಿ.ಎಸ್.ತೋಟಗಿ ಸತ್ಕಾರ ಸ್ವೀಕರಿಸಿ ಮಾತನಾಡಿದರು.

ಇದೇ ವೇಳೆ ತೋಟಗಿ ದಂಪತಿ ಅವರನ್ನು ಸತ್ಕರಿಸಲಾಯಿತು. ಸೇವೆ ಸಲ್ಲಿಸಿದ ಬಸ್ಸಿಗೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು. ಘಟಕ ವ್ಯವಸ್ಥಾಪಕ ಸಿದ್ದಪ್ಪ ಮುಕ್ಯಾಳ, ಘಟಕದ ಮುಖ್ಯಸ್ಥ ಎಂ.ಎಂ.ಆನಿಕಿವಿ, ಕಾರ್ಮಿಕ ಮುಖಂಡ ಸುರೇಶ ಯರಡ್ಡಿ, ವೈ.ಟಿ.ಬಾಗಾರ, ದ್ಯಾಮಣ್ಣ ಹತ್ತಿ, ವಾಸು ಮಡಿವಾಳರ, ಸುರೇಶ ಕೊಟಬಾಗಿ, ರಾಜು ಪಾಟೀಲ, ಈರಣ್ಣಾ ಚಿಟ್ಟಿ, ಧರೆಪ್ಪ ಸಂಗೊಳ್ಳಿ, ಈರಪ್ಪ ಉಪ್ಪಿನ ಇದ್ದರು.

ಬೈಲಹೊಂಗಲ ಸಾರಿಗೆ ಘಟಕ ಆವರಣದಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಸೇವಾ ನಿವೃತ್ತಿ ಹೊಂದಿದ ಚಾಲಕ ಬಿ.ಎಸ್.ತೋಟಗಿ ದಂಪತಿಯನ್ನು ಘಟಕದ ಸಿಬ್ಬಂದಿ ಸ್ನೇಹಿತರು ಕುಟುಂಬಸ್ಥರು ಸತ್ಕರಿಸಿದರು.
ಬೈಲಹೊಂಗಲ ಸಾರಿಗೆ ಘಟಕ ಆವರಣದಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಸೇವಾ ನಿವೃತ್ತಿ ಹೊಂದಿದ ಚಾಲಕ ಬಿ.ಎಸ್.ತೋಟಗಿ ದಂಪತಿಯನ್ನು ಘಟಕದ ಸಿಬ್ಬಂದಿ ಸ್ನೇಹಿತರು ಕುಟುಂಬಸ್ಥರು ಸತ್ಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT