ಭಾನುವಾರ, ನವೆಂಬರ್ 28, 2021
20 °C

‘ಕಾನೂನನ್ನು ಪ್ರತಿಯೊಬ್ಬರೂ ಗೌರವಿಸಬೇಕು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಾಗರಮುನ್ನೋಳಿ: ‘ದೇಶದ ಕಾನೂನಿಗೆ ಗೌರವ ನೀಡುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕು’ ಎಂದು ಜಿಲ್ಲಾ ಹೆಚ್ಚುವರಿ ನ್ಯಾಯಾಧೀಶ ಎಸ್.ಎಲ್. ಚವ್ಹಾಣ ಹೇಳಿದರು.

ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ 75ನೇ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ‘ಕಾನೂನು ಅರಿವು–ನೆರವು’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೆಲಸ ಮಾಡುವಾಗ ಕಾನೂನನ್ನು ಪಾಲಿಸಬೇಕು. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ; ಸಣ್ಣವರಲ್ಲ. ಎಲ್ಲರಿಗೂ ಸಮಾನವಾದ ಹಕ್ಕಿದೆ. ಎಲ್ಲರೂ ಕಾನೂನು ಪ್ರಕಾರ ನಡೆದರೆ ತಂಟೆ–ತಕರಾರುಗಳು ಇರುವುದಿಲ್ಲ. ಸಣ್ಣ ಪುಟ್ಟ ಸಮಸ್ಯೆಗಳನ್ನು ಹಿರಿಯರ ಮಧ್ಯಸ್ಥಿಕೆಯಲ್ಲಿ ಇತ್ಯರ್ಥಪಡಿಸಿಕೊಳ್ಳಬೇಕು. ಗ್ರಾಮವನ್ನು ಅಪರಾಧ ಮುಕ್ತ ಮಾಡಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕು’ ಎಂದು ಸಲಹೆ ನೀಡಿದರು.

ಸರ್ಕಾರಿ ಅಭಿಯೋಜಕ ವೈ.ಜಿ. ತುಂಗಳ ಮತ್ತು ವಕೀಲ ಎಂ.ಆರ್. ಸಗರೆ ಮಾತನಾಡಿದರು. ವಕೀಲರ ಸಂಘದ ಸಂಘದ ಅಧ್ಯಕ್ಷ ನಾಗೇಶ ಕಿವಡ ಮಾತನಾಡಿದರು. ಪಿ. ಶ್ರೀಕಾಂತ, ವಿಜಯಕುಮಾರ ಬಾಗಡೆ, ಎನ್.ವಿ. ಪಾಟೀಲ, ಮಲ್ಲಪ್ಪ ಟೊನಪೆ, ಎಂ.ಎಸ್. ಈಟಿ, ಡಿ.ಆರ್. ಕೋಟ್ಯಪಗೋಳ, ಎಲ್.ವಿ. ಬೋರನ್ನವರ, ಸಿದ್ದಪ್ಪ ಮರ‍್ಯಾಯಿ, ಶಂಕರ ನೇರ್ಲಿ, ಲಕ್ಷ್ಮೀಸಾಗರ ಈಟಿ, ಎಂ.ಬಿ. ಆಲೂರೆ, ರಮೇಶ ಕಾಳನ್ನವರ, ಸಿದ್ದೋಜಿರಾವ ದೇಸಾಯಿ, ಎ.ಎಂ. ಪಠಾಣ, ಮಹಾತೇಶ ಪಟೇವಾಲೆ, ಶಿವಾನಂದ ಆಲೂರೆ ಇದ್ದರು.

ವಿ.ಬಿ. ಈಟಿ ಸ್ವಾಗತಿಸಿದರು. ಎಸ್.ಆರ್. ಕುದರಗಿ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು