ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ | ಹುಲಿ ಬಂದಿದೆ ಎಂದು ನಕಲಿ ವಿಡಿಯೊ ಹರಿಬಿಟ್ಟ ಇಬ್ಬರು ಪೊಲೀಸ್‌ ವಶಕ್ಕೆ

Published 15 ಆಗಸ್ಟ್ 2024, 15:26 IST
Last Updated 15 ಆಗಸ್ಟ್ 2024, 15:26 IST
ಅಕ್ಷರ ಗಾತ್ರ

ಹಿರೇಬಾಗೇವಾಡಿ: ಸಮೀಪದ ಕೊಂಡಸಕೊಪ್ಪ ಮತ್ತು ಯರಮಾಳ ಬಳಿ ಹುಲಿ ಬಂದಿದೆ ಎಂಬ ನಕಲಿ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಇಬ್ಬರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಗುರುವಾರ ವಶಕ್ಕೆ ಪಡೆದರು.

ಕೊಂಡಸಕೊಪ್ಪದ ಶೀತಲ್‌ ಪಾಟೀಲ, ಮಲ್ಲೇಶ ದೇಸಾಯಿ ವಶಕ್ಕೆ ಪಡೆಯಲಾಗಿದೆ. ‘ಈ ಭಾಗದಲ್ಲಿ ಕಾಡುಬೆಕ್ಕು ಓಡಾಡುತ್ತಿದೆ ಎಂಬ ಮಾಹಿತಿ ನಮಗೆ ಸಿಕ್ಕಿತ್ತು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದ್ದೆವು. ಈ ಮಧ್ಯೆ, ಹುಲಿ ಓಡಾಡುತ್ತಿರುವ ವಿಡಿಯೊ ಶೀತಲ್‌ ಮತ್ತು ಮಲ್ಲೇಶ ವಾಟ್ಸ್‌ಆ್ಯಪ್‌ ಸಂಖ್ಯೆಗೆ ಬಂದಿತ್ತು. ಅದನ್ನು ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಇದು ಮಿಶ್ರತಳಿಯ ಹುಲಿ–ಚಿರತೆ ವಿಡಿಯೊ ಎಂದು ಬಿಂಬಿಸಲಾಗಿತ್ತು. ಆದರೆ, ಆ ವಿಡಿಯೊ ಅಸಲಿಯಲ್ಲ’ ಎಂದು ಬೆಳಗಾವಿ ವಲಯದ ಅರಣ್ಯ ಅಧಿಕಾರಿ ಪುರುಷೋತ್ತಮ್‌ ರಾವ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ವಿಡಿಯೊ ಇವರಿಬ್ಬರೇ ಎಡಿಟ್‌ ಮಾಡಿದ್ದಲ್ಲ. ಬೇರೆಯವರಿಂದ ಇವರಿಗೆ ಸಿಕ್ಕಿದೆ. ಆ ಬಗ್ಗೆ ತನಿಖೆ ಮಾಡುತ್ತಿದ್ದು, ದಂಡ ವಿಧಿಸುತ್ತಿದ್ದೇವೆ. ವಿಡಿಯೊದ ಮೂಲ ಪತ್ತೆ ಹಚ್ಚಲು ತನಿಖೆ ಮಾಡುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT