ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಲ ಉಳುಮೆ ವೇಳೆ ಟ್ರ್ಯಾಕ್ಟರ್ ಪಲ್ಟಿ: ರೈತ ಸಾವು

Published 25 ಜುಲೈ 2023, 15:53 IST
Last Updated 25 ಜುಲೈ 2023, 15:53 IST
ಅಕ್ಷರ ಗಾತ್ರ

ಖಾನಾಪುರ: ತಾಲ್ಲೂಕಿನ ಕಬನಾಳಿ ಗ್ರಾಮದ ಬಳಿ ಮಂಗಳವಾರ ಹೊಲ ಉಳುಮೆ ಮಾಡುತ್ತಿದ್ದ ವೇಳೆ ಚಿಕ್ಕ ಟ್ರ್ಯಾಕ್ಟರ್ ಪಲ್ಟಿಯಾಗಿ ರೈತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ತಿವೋಲಿವಾಡಾ ನಿವಾಸಿ, ನಿವೃತ್ತ ಶಿಕ್ಷಕರಾದ ಪಾಂಡುರಂಗ ಸದೊಬ್ಬ ಲಾಡಗಾಂವ್ಕರ್ (61) ಮೃತಪಟ್ಟವರು.

ಭತ್ತ ನಾಟಿ ಮಾಡುವ ಸಲುವಾಗಿ ಈ ರೈತ ಹೊಲ ಉಳುಮೆ ಮಾಡುತ್ತಿದ್ದರು. ಗದ್ದೆಯಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹವಾಗಿದ್ದು, ತಗ್ಗಿಗೆ ಸಿಕ್ಕಿಕೊಂಡ ಚಿಕ್ಕ ಟ್ರ್ಯಾಕ್ಟರ್ (ರೂಟೋವೇಟರ್) ಹಿಂದಕ್ಕೆ ಪಲ್ಟಿಯಾಗಿ ಬಿದ್ದಿತು. ಕೆಸರಿನಡಿ ಸಿಲುಕಿದ ರೈತ ಕೊನೆಯುಸಿರೆಳೆದರು ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳೀಯರ ನೆರವಿನಿಂದ ಮೃತರ ಕಳೇಬರವನ್ನು ಹೊರತೆಗೆದು, ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಘಟನಾ ಸ್ಥಳಕ್ಕೆ ಶಾಸಕ ವಿಠ್ಠಲ ಹಲಗೇಕರ, ಮಾಜಿ ಶಾಸಕರಾದ ಡಾ.ಅಂಜಲಿ ನಿಂಬಾಳಕರ, ಅರವಿಂದ ಪಾಟೀಲ ಭೇಟಿ ನೀಡಿದರು.

ಖಾನಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತರ ಕುಟುಂಬಕ್ಕೆ ಮಾಜಿ ಶಾಸಕಿ ಡಾ.ಅಂಜಲಿ ನಿಂಬಾಳಕರ ಸಾಂತ್ವನ ಹೇಳಿದರು
ಮೃತರ ಕುಟುಂಬಕ್ಕೆ ಮಾಜಿ ಶಾಸಕಿ ಡಾ.ಅಂಜಲಿ ನಿಂಬಾಳಕರ ಸಾಂತ್ವನ ಹೇಳಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT