ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಗ್ನಿ ದುರಂತ: ನಾವಗೆ ಕೈಗಾರಿಕಾ ಪ್ರದೇಶಕ್ಕೆ ಸಂಸದ ಶೆಟ್ಟರ್ ಭೇಟಿ

Published : 13 ಆಗಸ್ಟ್ 2024, 14:10 IST
Last Updated : 13 ಆಗಸ್ಟ್ 2024, 14:10 IST
ಫಾಲೋ ಮಾಡಿ
Comments

ಬೆಳಗಾವಿ: ‘ಕಾರ್ಖಾನೆಗಳಲ್ಲಿ ಯಾವುದೇ ಅವಘಡ ಸಂಭವಿಸಿದಾಗ ಕಾರ್ಮಿಕರ ಪ್ರಾಣ ಹಾನಿ ಆಗದಂತೆ ಎಚ್ಚರಿಕೆ ವಹಿಸಬೇಕು. ಜಿಲ್ಲೆಯ ಎಲ್ಲ ಕಾರ್ಖಾನೆಗಳ ಮಾಲೀಕರೂ ಇದನ್ನು ಚಾಚೂತಪ್ಪದೇ ಪಾಲಿಸಬೇಕು’ ಎಂದು ಸಂಸದ ಜಗದೀಶ ಶೆಟ್ಟರ್‌ ಸೂಚಿಸಿದರು.

ಬೆಳಗಾವಿ ತಾಲ್ಲೂಕಿನ ನಾವಗೆ ಕೈಗಾರಿಕಾ ಪ್ರದೇಶದಲ್ಲಿರುವ ಸ್ನೇಹಂ ಕಾರ್ಖಾನೆಯಲ್ಲಿ ಈಚೆಗೆ ಸಂಭವಿಸಿದ ಅಗ್ನಿ ದುರಂತದ ಹಿನ್ನೆಲೆಯಲ್ಲಿ ಮಂಗಳವಾರ ಕಾರ್ಖಾನೆಗೆ ಭೇಟಿ ನೀಡಿ ಮಾತನಾಡಿದರು.

‘ಕಾರ್ಖಾನೆಗಳಲ್ಲಿ ಅಗ್ನಿ ಅವಘಡ ಆಗದಂತೆ ಮುನ್ನೆಚ್ಚರಿಕೆ ವಹಿಸುವುದು ಬಹಳ ಮುಖ್ಯ. ಮಾರ್ಕಂಡೇಯ ನಗರದ ನಿವಾಸಿ ಯಲಗೊಂಡ ಗುಂಡ್ಯಾಗೋಳ ಅವರು ನಾವಗೆಯ ಕಾರ್ಖಾನೆಯಲ್ಲಿ ಸಜೀವ ದಹನವಾಗದ್ದು ದುಃಖದ ಸಂಗತಿ. ಇಂಥ ಸಂದರ್ಭಗಳಲ್ಲಿ ಕಾರ್ಖಾನೆಗಳ ಮಾಲೀಕರು ಕಾರ್ಮಿಕರ ಹಿತಾಸಕ್ತಿ ಕಾಪಾಡಬೇಕು’ ಎಂದೂ ತಿಳಿಸಿದರು.

ಕಾರ್ಖಾನೆಯ ಸುಟ್ಟ ಪ್ರದೇಶವನ್ನು ಪರಿಶೀಲಿಸಿದ ಶೆಟ್ಟರ್‌ ಅಧಿಕಾರಿಗಳಿಂದ ಮಾಹಿತಿ ಪಡೆದರು. ನಂತರ ಮಾರ್ಕಂಡೇಯ ನಗರಕ್ಕೆ ತೆರಳಿ ಮೃತ ಯಲಗೊಂಡ ಅವರ ತಂದೆ ಸಣ್ಣಯಲ್ಲಪ್ಪ ಅವರಿಗೆ ಸಾಂತ್ವನ ಹೇಳಿದರು.

ಮಾಜಿ ಶಾಸಕ ಸಂಜಯ ಪಾಟೀಲ, ಮುಖಂಡರಾದ ಧನಂಜಯ ಜಾಧವ್, ಚೇತನ್ ಅಂಗಡಿ, ಹೇಮಂತ ಪಾಟೀಲ, ನಾಗೇಂದ್ರ ದೇಸಾಯಿ, ಸಂತೋಷ ದೇಸಾಯಿ, ಗ್ರಾಮ ಪಂಚಾಯಿತಿಯ ಸದಸ್ಯರು ಇದ್ದರು.

ನೀವೇನು ಸಾಚಾನಾ?

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಚಾ ಆಗಿದ್ದರೆ ‘ಕೆಂಪಣ್ಣ ಆಯೋಗ’ದ ವರದಿ ಬಿಡುಗಡೆ ಮಾಡಲಿ’ ಎಂದು ಜಗದೀಶ ಶೆಟ್ಟರ್ ಸವಾಲು ಹಾಕಿದರು.

‘ಮುಡಾ’ ಹಗರಣದಲ್ಲಿ ನಾನು ಪ್ರಾಮಾಣಿಕ ಎಂದು ಪದೇಪದೇ ಗಂಟೆ ಹೊಡೆದರೆ ಆಗುವುದಿಲ್ಲ. ಅದರ ಬದಲಾಗಿ, ಪ್ರಾಮಾಣಿಕತೆ ತೋರಿಸುವ ವರದಿ ಬಿಡುಗಡೆ ಮಾಡಿರಿ. ನೀವು ನುಣಿಚಿಕೊಳ್ಳುವುದರಿಂದ ತಪ್ಪು ಮಾಡಿದ್ದು ಗೊತ್ತಾಗುತ್ತಿದೆ’ ಎಂದು ಆರೋ‍ಪಿಸಿದರು.

‘ಪಾದಯಾತ್ರೆ ಮಾಡಿ ಸರ್ಕಾರದ ತಪ್ಪನ್ನು ಜನರ ಮುಂದಿಡುವುದು ನಮ್ಮ ಜವಾಬ್ದಾರಿ. ತಪ್ಪು ಮಾಡಿದವರ ರಾಜೀನಾಮೆ ಕೇಳುತ್ತಿದ್ದೇವೆ. ಅವರಿಗೆ ಧೈರ್ಯವಿದ್ದರೆ ಸಮರ್ಥನೆ ಮಾಡಿಕೊಳ್ಳಬೇಕು, ತಪ್ಪು ಮಾಡಿಲ್ಲವೆಂದು ಸಾಬೀತು ಮಾಡಬೇಕು. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲೂ ಅವರ ನೇರ ಕೈವಾಡವಿದೆ’ ಎಂದೂ ದೂರಿದರು.

‘ಅಣೆಕಟ್ಟೆ ನಿರ್ವಹಣೆಗೂ ದುಡ್ಡಿಲ್ಲ

‘ರಾಜ್ಯ ಸರ್ಕಾರ ಗ್ಯಾಂಟಿಗಳನ್ನು ಜಾರಿ ಮಾಡುವ ಭರದಲ್ಲಿ ಖಜಾನೆ ಖಾಲಿ ಮಾಡಿದೆ. ಹೊಸ ಅಣೆಕಟ್ಟೆಗಳನ್ನು, ಏತನೀರಾವರಿ ಮಂಜೂರು ಮಾಡುವುದು ದೂರದ ಮಾತು; ಇದ್ದ ಅಣೆಕಟ್ಟೆಗಳನ್ನು ನಿರ್ವಹಣೆ ಮಾಡುವುದಕ್ಕೂ ದುಡ್ಡಿಲ್ಲ. ತುಂಗಭದ್ರಾ ಜಲಾಶಯವೇ ಇದಕ್ಕೆ ಉದಾಹರಣೆ. ಖುದ್ದು ನಾನು ಅಣೆಕಟ್ಟೆ ನೋಡಿ ಬಂದಿದ್ದೇನೆ. ನಿರ್ವಹಣೆ ಮಾಡುವುದಕ್ಕೆ ಸಿಬ್ಬಂದಿ, ಎಂಜಿನಿಯರ್‌ಗಳೇ ಇಲ್ಲ. ಇದು ಸರ್ಕಾರದ ಸದ್ಯದ ಸ್ಥಿತಿ’ ಎಂದು ಜಗದೀಶ ಶೆಟ್ಟರ್‌ ಕಿಡಿ ಕಾರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT