ಮಂಗಳವಾರ, ಮೇ 24, 2022
30 °C

ಮಂಗಳಮುಖಿಯರಿಗೆ ಮೊಬೈಲ್ ಕ್ಯಾಂಟೀನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಇಲ್ಲಿನ ‘ಹ್ಯೂಮ್ಯಾನಿಟಿ ಫೌಂಡೇಷನ್‌’ ಮತ್ತು ಇನ್ನರ್‌ವೀಲ್‌ ಕ್ಲಬ್ ವತಿಯಿಂದ ಮಂಗಳಮುಖಿಯರಿಗೆ ಮೊಬೈಲ್ ಕ್ಯಾಂಟೀನ್‌ (ತಳ್ಳು ಗಾಡಿ) ಅನ್ನು ಬುಧವಾರ ವಿತರಿಸಲಾಯಿತು.

ಕ್ಲಬ್‌ನ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಾ ಭೈರೆ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.

‘ಜಿಲ್ಲೆಯಲ್ಲಿ ಮಂಗಳಮುಖಿಯರ ಸಬಲೀಕರಣ ನಿಟ್ಟಿನಲ್ಲಿ ಹಾಗೂ ಅವರನ್ನು ಸಮಾಜದ ಮುಖ್ಯವಾಹಿಸಿಗೆ ತರುವ ಉದ್ದೇಶದಿಂದ ತಳ್ಳು ಗಾಡಿಗಳನ್ನು ನೀಡಲಾಗುತ್ತಿದೆ. ಅವರು ಅದನ್ನು ಬಳಸಿ ರಸ್ತೆಬದಿಯಲ್ಲಿ ಕ್ಯಾಂಟೀನ್‌ ಆರಂಭಿಸಿ ತಿನಿಸುಗಳನ್ನು ಮಾರಿ ಜೀವನ ರೂಪಿಸಿಕೊಳ್ಳಬಹುದು. ಇದರಿಂದ ಅವರು ಬೇರೊಬ್ಬರ ಮೇಲೆ ಅವಲಂಬಿತವಾಗುವುದು ತಪ್ಪುತ್ತದೆ. ಅವರಿಗೂ ಸಮಾಜದಲ್ಲಿ ಉತ್ತಮ ಸ್ಥಾನ ದೊರೆಯಬೇಕು ಎನ್ನುವುದು ನಮ್ಮ ಆಶಯವಾಗಿದೆ. ನಗರದಲ್ಲಿ ಇದೇ ಮೊದಲಿಗೆ ಈ ಉಪಕ್ರಮ ಕೈಗೊಂಡಿದ್ದೇವೆ’ ಎಂದರು.

ಹ್ಯೂಮಾನಿಟಿ ಪ್ರತಿಷ್ಠಾನದ ಅಧ್ಯಕ್ಷೆ ಸುಷ್ಮಾ ಶೆಟ್ಟಿ, ‘ಮಂಗಳಮುಖಿಯರಿಗೆ ಕಾನೂನು ಜಾಗೃತಿಯನ್ನೂ ಮೂಡಿಸಲಾಗುತ್ತಿದೆ’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.