ಬೆಳಗಾವಿ: ಜಿಲ್ಲೆಯ ಗೋಕಾಕ ತಾಲ್ಲೂಕಿನ ಘಟಪ್ರಭಾ ಸಮೀಪದ ಧುಪದಾಳ ಜಲಾಶಯದಲ್ಲಿ ನೀರಿಗೆ ಇಳಿದ ನಾಲ್ವರು ಯುವಕರು ಮೃತಪಟ್ಟಿದ್ದಾರೆ. ಒಬ್ಬನ ಸ್ಥಿತಿ ಗಂಭೀರವಾಗಿದ್ದು, ಒಬ್ಬ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸಂತೋಷ್ ಬಾಬು ಈಡಗ (19), ಅಜಯ ಬಾಬು ಜೋರೆ (19), ಕೃಷ್ಣ ಬಾಬು ಜೋರೆ (20), ಆನಂದ ವಿಟ್ಟು ಕೋಕಡೆ (20) ಮೃತರು. ರಾಮಚಂದ್ರ ಕೋಕಡೆ ಗಂಭೀರ (20) ಸ್ಥಿತಿ ಚಿಂತಾಜನಕವಾಗಿದೆ. ವಿಠ್ಠಲ್ ಜಾನು ಕೋಕಡೆ (20) ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಎಲ್ಲರೂ ಉತ್ತರಕನ್ನಡ ಜಿಲ್ಲೆಯ ಸಮೀಪದ ಮುಂಡಗೋಡ ತಾಲ್ಲೂಕಿನ ಸಿರಿಗೆರೆ ಗ್ರಾಮದವರು. ಘಟಪ್ರಭಾದ ಬಾರೊಂದರಲ್ಲಿ ಕೆಲಸ ಮಾಡುತ್ತಿದ್ದರು.

ಶುಕ್ರವಾರ ರಜೆ ಇದ್ದ ಕಾರಣ ಪ್ರವಾಸಕ್ಕೆ ಹೋಗಿದ್ದರು ಎನ್ನಲಾಗಿದೆ.

ಎಲ್ಲರಿಗೂ ಈಜು ಬರುತ್ತಿದ್ದ ಕಾರಣ ಜಲಾಶಯಕ್ಕೆ ಇಳಿದರು. ಈಜುವಾಗಲೇ ಕೆಸರಿನಲ್ಲಿ ಸಿಲುಕಿ ಮೃತಪಟ್ಟರು ಎಂದು ಸ್ಥಳದಲ್ಲಿದ್ದವರು ಮಾಹಿತಿ ನೀಡಿದ್ದಾರೆ.

ಎಲ್ಲರನ್ನೂ ಘಟಪ್ರಭಾ ಕೆಎಚ್ಐ ಆಸ್ಪತ್ರೆಯಲ್ಲಿ ಇಡಲಾಗಿದೆ.

ಇವನ್ನೂ ಓದಿ...

ತುಮಕೂರು: ಕಾರಿಗೆ ಬಸ್ ಡಿಕ್ಕಿ, ಬೆಂಗಳೂರಿನ ವಿಜಯನಗರದ ಐವರು ಸ್ಥಳದಲ್ಲೇ ಸಾವು

ಕೊಡಗು: ಸಂಪಾಜೆ ಸಮೀಪ ಕೆಎಸ್ಆರ್ಟಿಸಿ ಬಸ್ –ಕಾರು ಡಿಕ್ಕಿ, ಆರು ಮಂದಿ ಸಾವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.