ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಜ.26 ರಿಂದ ನಾಟಕ ರಚನಾ ಕಮ್ಮಟ

Published 17 ಡಿಸೆಂಬರ್ 2023, 7:28 IST
Last Updated 17 ಡಿಸೆಂಬರ್ 2023, 7:28 IST
ಅಕ್ಷರ ಗಾತ್ರ

ಬೆಳಗಾವಿ: ‘ಈ ಹೊತ್ತಿಗೆ’ ಟ್ರಸ್ಟ್‌ನಿಂದ ‘ನಮ್ಮವರೊಂದಿಗೆ’ ಬಳಗದ ಸಹಯೋಗದೊಂದಿಗೆ 2024ರ ಜನವರಿ 26ರಿಂದ 28ರವರೆಗೆ ಬೆಳಗಾವಿಯಲ್ಲಿ ‘ನಾಟಕ ರಚನಾ ಕಮ್ಮಟ’ ಆಯೋಜಿಸಿದೆ.

ವಿಮರ್ಶಕಿ ಎಂ.ಎಸ್.ಆಶಾದೇವಿ ಈ ಕಮ್ಮಟಕದ ನಿರ್ದೇಶಕಿ ಆಗಿದ್ದಾರೆ. ಕೆ.ವೈ.ನಾರಾಯಣಸ್ವಾಮಿ, ಶ್ರೀಪಾದ ಭಟ್, ಹೇಮಾ ಪಟ್ಟಣಶೆಟ್ಟಿ, ರಾಮಕೃಷ್ಣ ಮರಾಠೆ, ಪ್ರಕಾಶ್ ಗರುಡ ಮತ್ತು ರಜನಿ ಗರುಡ ಅವರು ಸಂಪನ್ಮೂಲ ವ್ಯಕ್ತಿಗಳಾಗಿದ್ದಾರೆ. 30 ಜನರಿಗೆ ಮಾತ್ರ ಅವಕಾಶವಿದೆ. ಜನವರಿ 7 ಅರ್ಜಿ ಸಲ್ಲಿಸಲು ಕೊನೆಯ ದಿನ. ಆಯ್ಕೆಯಾದವರಿಗೆ ಊಟ, ವಸತಿ ಸೇರಿ ಕಮ್ಮಟದ ಪ್ರವೇಶ ಶುಲ್ಕ ₹2,000. ಆಸಕ್ತರು ehottige.ks@gmail.com ಈ ವಿಳಾಸಕ್ಕೆ ಪರಿಚಯ, ಸಂಪರ್ಕ ಸಂಖ್ಯೆ, ಭಾವಚಿತ್ರ ಕಳುಹಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT